ಮಂಡ್ಯ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಮಂಡ್ಯ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಇಂದು ( ಏಪ್ರಿಲ್ 4 ) ಬಿಜೆಪಿ – ಜಾ.ದಳ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಜತೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಉಪಸ್ಥಿತರಿದ್ದರು.
ಈ ಸಲುವಾಗಿ ಮಂಡ್ಯಕ್ಕೆ ಆಗಮಿಸಿ ಮಾತನಾಡಿದ ಯಡಿಯೂರಪ್ಪ ಏಪ್ರಿಲ್ 6ರಂದು ಸುಮಲತಾ ಅಂಬರೀಶ್ ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದರು. ʼಸುಮಲತಾ ಅವರು ಈಗಾಗಲೇ ಬಿಜೆಪಿ ಸೇರಬೇಕು ಎಂದು ನಿಶ್ಚಯ ಮಾಡಿದ್ದಾರೆ. 6ನೇ ತಾರೀಖು ಬಿಜೆಪಿ ಕಚೇರಿಗೆ ಬಂದು ಸೇರ್ಪಡೆಗೊಳ್ಳಲಿದ್ದಾರೆ. ಅದರಿಂದ ದೊಡ್ಡ ಶಕ್ತಿ ಬಂದಂತಾಗಿದೆ. ಅವರನ್ನು ಸ್ವಾಗತ ಮಾಡುತ್ತೇನೆʼ ಎಂದು ಯಡಿಯೂರಪ್ಪ ಹೇಳಿದರು.





