ಮೈಸೂರು : ನಗರದ ಅಗ್ರಹಾರ ರಸ್ತೆ ಕಿಲ್ಲೇ ಮೊಹಲ್ಲಾದಲ್ಲಿರುವ ಶೃಂಗೇರಿ ಶಂಕರ ಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಲೋಕಸಭಾ ಚುನಾವಣೆ ಹಿನ್ನಲೆ ಮೈಸೂರು-ಕೊಡಗ ಹಾಗೂ ಚಾಮರಾಜನಗರ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನವ ಶಂಕರಾಲಯಕ್ಕೆ(ಶಂಕರ ಮಠ) ಭೇಟಿ ನೀಡಿದರು.
ಈ ವೇಳೆ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್‌ನ ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್, ಶಾಸಕ ಹರೀಶ್ ಗೌಡ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮಾಜಿ ಮೂಡಾ ಅಧ್ಯಕ್ಷ, ಹೆಚ್.ವಿ.ರಾಜೀವ್, ಶೃಂಗೇರಿ ಶಂಕರ ಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಉಪಸ್ಥಿತರಿದ್ದರು.