Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

IPL 2024: ರಾಜಸ್ತಾನ್‌ ಸಂಘಟಿತ ಆಟಕ್ಕೆ ತಲೆಬಾಗಿದ ಮುಂಬೈ

ಮುಂಬೈ: ರಾಜಸ್ತಾನ್‌ ತಂಡ ದಿಟ್ಟ ಬೌಲಿಂಗ್‌ ದಾಳಿ ಮುಂದೆ ಮಂಕಾದ ಮುಂಬೈ ಇಂಡಿಯನ್ಸ್‌ ತಂಡ ತನ್ನ ತವರಿನಂಗಳದಲ್ಲಿಯೇ ಸೋಲಿನ ರುಚಿ ಕಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ತಾನ್‌ ನಡುವಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 125 ರನ್‌ ಕೆಲಹಾಕಿ 126ರನ್‌ ಗುರಿ ನೀಡಿತು. ಇದನ್ನು ಬೆನ್ನತ್ತಿದ ರಾಜಸ್ತಾನ್‌ ಕೇವಲ 15.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 127 ಬಾರಿಸಿ ಗೆಲುವಿನ ನಗೆ ಬೀರಿತು.

ಮುಂಬೈ ಇನ್ನಿಂಗ್ಸ್‌: ಮುಂಬೈ ತಂಡದ ಆರಂಭಿಕ ಆಟಗಾರರು ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ದಾಳಿಗೆ ತತ್ತರಿಸಿದರು. ರನ್ ಖಾತೆ ತೆರೆಯುವ ಮುನ್ನವೇ ರೋಹಿತ್ ಶರ್ಮಾ, ನಮನ್ ಧೀರ್, ಡೆವಾಲ್ಡ್ ಬ್ರೆವಿಸ್ ಪೆವಿಲಿಯನ್ ಸೇರಿದರು. ನಾಯಕ ಹಾರ್ದಿಕ್ ಪಾಂಡ್ಯ 21 ಎಸೆತಗಳಲ್ಲಿ 6 ಬೌಂಡರಿ ಸಹಿತ 34 ರನ್ ಗಳಿಸಿದರು. ತಿಲಕ್ ವರ್ಮಾ 32, ಟಿಮ್ ಡೇವಿಡ್ 17, ಇಶಾನ್ ಕಿಶನ್ 16 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಶ್ರಮಿಸಿದರು.

ಆರ್‌ಆರ್‌ ಪರ ಟ್ರೆಂಟ್ ಬೌಲ್ಡ್ ಹಾಗೂ ಯಜುವೇಂದ್ರ ಚಾಹಲ್ ತಲಾ ಮೂರು ವಿಕೆಟ್ ಪಡೆದರೆ, ನಾಂದ್ರೆ ಬರ್ಗರ್ 2, ಆವೇಶ್ ಖಾನ್ ಒಂದು ವಿಕೆಟ್ ಕಬಳಿಸಿ ಮಿಂಚಿದರು.

ರಾಜಸ್ತಾನ್‌ ಇನ್ನಿಂಗ್ಸ್‌: ಸಾಧಾರಣ ಮೊತ್ತ ಬೆನ್ನತ್ತಿದ ರಾಜಸ್ತಾನ್‌ ಗೂ ಆರಂಭಿಕ ಆಘಾತ ಉಂಟಾಯಿತು. ಜೈಸ್ವಾಲ್‌ ಕೇವಲ 10 ರನ್‌ ಗಳಿಸಿ ನಿರ್ಗಮಿಸಿದರು. ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್‌ 12ಕ್ಕೆ ಆಟ ಮುಗಿಸಿದರು. ಬಟ್ಲರ್‌ ಎಂದಿನಿಂತೆ 13 ರನ್‌ ಅಲ್ಪ ಮೊತ್ತ ಕೆಲಹಾಕಿ ಪೆವಿಲಿಯನ್‌ ದಾರಿ ಹಿಡಿದರು.

ಬಳಿಕ ಜೊತೆಯಾದ ಅಶ್ವಿನ್‌ ಹಗೂ ರಿಯಾನ್‌ ಪರಾಗ್‌ ಆಟವನ್ನು ರಾಜಸ್ತಾನ್‌ ನತ್ತ ವಾಲಿಸುವಲ್ಲಿ ಯಶಸ್ವಿಯಾದರು. ಅಶ್ವಿನ್‌ 16 ಗಳಿಸಿದರೇ, ಪರಾಗ್‌ ಕೇವಲ 39 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್‌ ಸಹಿತ 54 ರನ್‌ ಗಳಿಸಿ ತಂಡದ ಗೆಲುವಿಗೆ ಕಾರಣದರಾದರು.

ಮುಂಬೈ ಪರ ಆಕಾಶ್‌ ಮಧ್ವಲ್‌ ಮೂರು, ಮಫಕಾ ಒಂದು ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ಟ್ರೆಂಟ್‌ ಬೋಲ್ಟ್‌

Tags: