Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಪೊಲೀಸ್, ಗೃಹರಕ್ಷಕ, ಅಗ್ನಿಶಾಮಕ ಇಲಾಖೆಗಳೆಲ್ಲಿ ಭಿನ್ನವಿಲ್ಲ, ಒಂದೇ: ನಂದಿನಿ

ಮೈಸೂರು: ಪೊಲೀಸ್, ಗೃಹರಕ್ಷಕ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸದಾಕಾಲ ಸಮಾಜದ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಈ ಮೂರು ಇಲಾಖೆಗಳೂ ಭಿನ್ನವಲ್ಲ. ಒಂದೆಯಾಗಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎನ್.ನಂದಿನಿ ತಿಳಿಸಿದರು.

ಜ್ಯೋತಿನಗರದಲ್ಲಿರುವ ಡಿಎಆರ್ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾ ಗೃಹರಕ್ಷಕ ದಳದಿಂದ ಏರ್ಪಡಿಸಿದ್ದ ೧ನೇ ಬ್ಯಾಚ್‌ನ ಗೃಹರಕ್ಷಕರ ಮೂಲ ತರಬೇತಿ ಶಿಬಿರದ ಸವಾರೋಪ ಹಾಗೂ ೨ನೇ ಬ್ಯಾಚ್‌ನ ಆರಂಭ ಸವಾರಂಭವನ್ನು ಉದ್ಘಾಟಿಸಿ ಅವರು ವಾತನಾಡಿದರು.

ಗೃಹರಕ್ಷಕ ಇಲಾಖೆಯು ಸೇವಾ ಮನೋಭಾವವನ್ನು ಹೊಂದಿದೆ. ಜಿಲ್ಲೆಗೆ ಒಂದು ಸಾವಿರ ಗೃಹರಕ್ಷಕರ ಅಗತ್ಯವಿದೆ. ಗೃಹರಕ್ಷಕ ಇಲಾಖೆ ನಡೆಸುವುದು ಅತ್ಯಂತ ಜವಾಬ್ದಾರಿ ಕೆಲಸ. ಇಲಾಖೆಗೆ ಅಗತ್ಯವಾಗಿ ಬೇಕಾದುದು ತಕ್ಷಣಕ್ಕೇ ಸಿಗುವುದಿಲ್ಲ. ಇಂತಹ ಸಮುಂದಲ್ಲಿ ತಮ್ಮ ಇತಿ ಮಿತಿುಯಲ್ಲಿ ಕಾಂತರಾಜ್ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾವು, ನೀವೆಲ್ಲರೂ ಖಾಕಿ ತೊಡುತ್ತೇವೆ. ಖಾಕಿ ತೊಟ್ಟ ಮೇಲೆ ನಿಮ್ಮ ಕೆಲಸದಲ್ಲಿ ಶಿಸ್ತು, ಶ್ರದ್ಧೆ ಹಾಗೂ ಬದ್ಧತೆ ಇರಬೇಕು. ಸಮವಸ್ತ್ರ ಇಲ್ಲದಿದ್ದರೆ ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಸಮವಸ್ತ್ರ ತೊಟ್ಟಲ್ಲಿ ನೀವು ಎಚ್ಚರಿಕೆಯಿಂದ ಕೆಲಸ ವಾಡಬೇಕು. ಇಲ್ಲವಾದಲ್ಲಿ ಸಾವಾಜಿಕ ಜಾಲತಾಣದಲ್ಲಿ ಬರುವ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ತರಬೇತಿ ಪೂರ್ಣಗೊಳಿಸಿದ ಒಂದನೇ ಬ್ಯಾಚ್‌ನ ೧೪೮ ಮಂದಿಗೆ ಪ್ರವಾಣ ಪತ್ರ ವಿತರಿಸಲಾಯಿತು. ೨ನೇ ಬ್ಯಾಚ್‌ನ ೧೪೨ ಮಂದಿಯನ್ನು ತರಬೇತಿಗೆ ಸ್ವಾಗತಿಸಲಾಯಿತು.

ಜಿಲ್ಲಾ ಗೃಹರಕ್ಷಕ ದಳದ ಗೌರವ ಸವಾದೇಷ್ಟ ಡಾ.ಎಂ.ಕಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ.ಎನ್.ಆರ್.ಶಿವರಾಂ, ಸಹಾಯಕ ಆಡಳಿತಾಧಿಕಾರಿ ಎಂ.ಎನ್.ವಿಶ್ವನಾಥ್, ಬೋಧಕರಾದ ಎಂ.ಆರ್.ಚಂದನ್, ಎಸ್.ಮಂಜುನಾಥ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Tags: