Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ದಕ್ಷಿಣ ಆಫ್ರಿಕಾ: ಸೇತುವೆಯಿಂದ ಉರುಳಿದ ಬಸ್;‌ 45 ಮಂದಿ ಸಾವು

ಕೇಪ್‌ಟೌನ್:‌ ಈಸ್ಟರ್‌ ಹಬ್ಬಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಬಸ್‌ ಸೇತುವೆ ಮೇಲಿಂದ ಉರುಳಿದ ಪರಿಣಾಮ 45 ಮಂದಿ ಮೃತಪಟ್ಟಿರುವ ಘಟನೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದಿದೆ.

ಮಮಟ್ಲಕಾ ಸೇತುವೆಯಿಂದ ಬಸ್‌ 164 ಅಡಿ ಕೆಳಕ್ಕೆ ಬಿದ್ದಿದ್ದು, ತಕ್ಷಣವೇ ಬೆಂಕಿ ಹೊತ್ತುಕೊಂಡಿದೆ. ಘಟನೆಯಲ್ಲಿ 45 ಮಂದಿ ಸಾವನ್ನಪ್ಪಿದ್ದು, 8 ವರ್ಷದ ಬಾಲಕನೊಬ್ಬ ಅದೃಷ್ಟವಷಾತ್‌ ಬದುಕುಳಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಏರ್‌ಲಿಫ್ಟ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲಿಂಪೊಪೊ ಉತ್ತರ ಪ್ರಾಂತ್ಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಬಸ್‌ ವೇಗವಾಗಿ ಚಲಿಸುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗುರುಳಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್‌ನಲ್ಲಿದ್ದ ಜನರು ನೆರೆಯ ದೇಶವಾದ ನೆರೆ ದೇಶ ಬೋಟ್ಸ್‌ವಾನಾದಿಂದ ಈಸ್ಟರ್‌ ತೀರ್ಥಯಾತ್ರೆಗಾಗಿ ಮೊರಿಯಾ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

Tags: