Mysore
18
overcast clouds

Social Media

ಗುರುವಾರ, 01 ಜನವರಿ 2026
Light
Dark

ಕರ್ನಾಟಕದಲ್ಲಿ ಕಾಂಗ್ರೆಸ್‌ ಸ್ಟ್ರಾಂಗ್‌ ಇದೆ: ಸಾಹಿತಿ ಎಸ್‌.ಎಲ್‌ ಭೈರಪ್ಪ

ಮೈಸೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಸ್ಟ್ರಾಂಗ್‌ ಇರುವ ಕಾರಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅರ್ಧದಷ್ಟು ಮಾತ್ರ ಗೆಲ್ಲಲಿದೆ ಎಂದು ಹಿರಿಯ ಸಾಹಿತಿ ಎಸ್‌.ಎಲ್‌ ಭೈರಪ್ಪ ಹೇಳಿದ್ದಾರೆ.

ಇಂದು ನಗರದ ಕುವೆಂಪುನಗರದ ಎಸ್‌.ಎಲ್‌ ಭೈರಪ್ಪ ಅವರ ಮನೆಗೆ ಭೇಟಿ ನೀಡಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಕುಶಲೋಪಾಯ ವಿಚಾರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಒಲವು ಹೊಂದಿರುವ ಭೈರಪ್ಪ ಅವರು ಕಾಂಗ್ರೆಸ್‌ ಪರವಾಗಿ ಮಾತನಾಡಿದ್ದು, ಸದ್ಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ರಾಜ್ಯದಲ್ಲಿ ಕಳೆದ ಬಾರಿ ಅಧಿಕಾರ ಮಾಡಿದ ಬಿಜೆಪಿ, ಸರ್ಕಾರವನ್ನು ಸರಿಯಾಗಿ ನಡೆಸಿಲ್ಲ. ಇದನ್ನೇ ಕಾಂಗ್ರೆಸ್‌ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದು ಕರ್ನಾಟಕದಲ್ಲಿ ಬಿಜೆಪಿ ವೀಕ್‌ ಆಗಿರುವುದನ್ನು ತೋರಿಸುತ್ತದೆ ಎಂದರು. ಯುಪಿ ಯ ಯೋಗಿ ಮಾದರಿ ಸರ್ಕಾರ ರಾಜ್ಯದಲ್ಲಿದ್ದಿದ್ದರೇ ಹೆಚ್ಚು ಸೀಟ್‌ ಗೆಲ್ಲಬಹುದಿತ್ತು ಎಂದೂ ಅವರು ಅಭಿಪ್ರಾಯಪಟ್ಟರು.

ರಾಜ್ಯದ ಆರ್ಥಿಕತೆಯ ಮೇಲೆ ಕಾಂಗ್ರೆಸ್‌ ಗ್ಯಾರೆಂಟಿಗಳು ಕೆಟ್ಟ ಪರಿಣಾಮವನ್ನು ಬೀರಿದೆ. ಇದನ್ನು ಮರೆಮಾಚಲು ಕಾಂಗ್ರೆಸ್‌ ಕೇಂದ್ರದ ಕಡೆ ಬೊಟ್ಟು ಮಾಡಿ ತೋರುತ್ತಿದೆ. ಕೇಂದ್ರದಿಂದ ಬಂದ ಆದಾಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಈ ಬಾರಿ ಮೋದಿ ಅಲೆ ಇದಿಯೋ ಇಲ್ಲವೋ ಗೊತ್ತಿಲ್ಲ. ಆದರೆ ಕೇಂದ್ರದಲ್ಲಿ ಮಾತ್ರ ಈ ಬಾರಿಯೂ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿದ್ದಾರೆ ಎಂದು ಹಿರಿಯ ಸಾಹಿತಿ ಎಸ್‌.ಎಲ್ ಭೈರಪ್ಪ ಹೇಳಿಕೆ ನೀಡಿದ್ದಾರೆ.

Tags:
error: Content is protected !!