Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಪ್ಪನ ದುಡ್ಡಿಂದ ಅಧಿಕಾರಕ್ಕೆ ಬಂದವರಿಗೆ ಬಡವರ ಕಷ್ಟ ಕಾಣಿಸುತ್ತಾ?: ಸಿ.ಟಿ ರವಿ

ಬೆಂಗಳೂರು: ಅಪ್ಪನ ದುಡ್ಡಿಂದ ಅಧಿಕಾರಕ್ಕೆ ಬಂದವರು ಹೀಗೆನೇ. ಅವರು ಎಂದಾದರೂ ಪಕ್ಷದ ಕೆಲಸವನ್ನು ಮಾಡಿದ್ದಾರಾ? ಇವರಿಗೆ ಬಡವರ ಕಷ್ಟ ಕಾಣಿಸುತ್ತಾ ಎಂದು ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯ ಮೇಲೆ ಸಿಟಿ ರವಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಅಪರಾಧ ಚಟುವಟಿಕೆ ಹಿನ್ನಲೆಯಿರುವ ಒಬ್ಬ ವ್ಯಕ್ತಿ ಇಂದು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಅವರೊಬ್ಬ ಗೂಂಡಾ, ರೌಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಯತೀಂದ್ರ ಹರಿಹಾಯ್ದಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾಡುವಾಗ ಸಿಟಿ ರವಿ, ಯತೀಂದ್ರ ವಿರುದ್ಧ ಮಾತನಾಡಿದ್ದಾರೆ.

1982ರಲ್ಲೇ ಅಮಿತ್ ಶಾ ಬೂತ್ ಅಧ್ಯಕ್ಷರಾಗಿದ್ದರು. ಆಗ ಇವರಪ್ಪ ಎಂಎಲ್‌ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನ ಮೇಲೆ ಶಾಸಕರಾದವರು ಈಗ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ನಾವು ವಿದ್ಯಾರ್ಥಿಗಳಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದವು. ಆಗಲೂ ನಮ್ಮ ಮೇಲೂ ಗೂಂಡಾ ಆಕ್ಟ್ ಹಾಕಿದ್ರು ಹಾಗಾದ್ರೆ ನಾವು ಗೂಂಡಾಗಳಾ..? ಅಪ್ಪನ ದುಡ್ಡಿನಲ್ಲಿ ಚುನಾವಣೆ ಎದುರಿಸಿದ ಇವರೆಲ್ಲಾ, ಚುನಾವಣೆ ಮುಗಿದ ಮೇಲೆ ಎಲ್ಲಿರುತ್ತಾರೋ ಎಂದು ಪ್ರಶ್ನಿಸಿದರು.

Tags: