Mysore
28
broken clouds

Social Media

ಮಂಗಳವಾರ, 16 ಜೂನ್ 2026
Light
Dark

ಮಂಡ್ಯಕ್ಕೆ ಕುಮಾರಣ್ಣ ಅದ್ಭುತ ನಾಯಕ: ಅಶ್ವಥ್‌ ನಾರಾಯಣ್‌!

ಮಂಡ್ಯ: ಮಂಡ್ಯ ಕ್ಷೇತ್ರಕ್ಕೆ ಅದ್ಭುತ ನಾಯಕ ಬೇಕಾಗಿದೆ. ಅದು ಕುಮಾರಣ್ಣ ಮಾತ್ರ ಆಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರನ್ನ ಗೆಲ್ಲಿಸುವಂತೆ ಶಾಸಕ ಸಿ.ಎನ್ ಅಶ್ವತ್ ನಾರಾಯಣ್ ಮನವಿ ಮಾಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಖಚಿತವಾದ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, ನಮ್ಮ ಶತ್ರು ಯಾರು ಅಂದರೆ ಕಾಂಗ್ರೆಸ್, ಕಾಂಗ್ರೆಸ್ ನವರು ದುಡ್ಡು ಇರುವವರನ್ನು ಚುನಾವಣೆಗೆ ಕರೆದುಕೊಂಡು ಬರುತ್ತಾರೆ. ಎಚ್.ಡಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕುಮಾರಸ್ವಾಮಿ, ವಿಜಯೇಂದ್ರ ಇಬ್ಬರನ್ನು ಅಣ್ಣ ತಮ್ಮನ ರೀತಿ ನೋಡಬೇಕು. ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲಲ್ಲು ಕಾರ್ಯಪ್ರವೃತ್ತರಾಗಬೇಕು ಎಂದು ಅಶ್ವಥ್ ನಾರಾಯಣ್ ತಿಳಿಸಿದರು.

Tags:
error: Content is protected !!