Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸಭೆಯಿಂದ ಅರ್ಧದಲ್ಲೇ ಹೊರನಡೆದ ಸಂಸದ ಪ್ರತಾಪ್‌ ಸಿಂಹ: ಕಾರಣ ನಿಗೂಢ!

ಮೈಸೂರು: ಜೆಡಿಎಸ್‌-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಮಾವೇಶದಲ್ಲಿ ಪ್ರತಾಪ್‌ ಸಿಂಹ ಮತ್ತೊಮ್ಮೆ ತಮ್ಮ ಅಹನೆಯನ್ನು ಹೊರ ಹಾಕಿದ್ದಾರೆ. ಸಭೆಯ ಮಧ್ಯದಲ್ಲಿಯೇ ಎದ್ದು ಹೋಗಿದ್ದು, ಇನ್ನು ಯಾವುದು ಸರಿಯಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದಂತಾಗಿದೆ.

ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್‌ ಕೈ ತಪ್ಪಿದ ಬೆನ್ನಲ್ಲೇ ಪ್ರತಾಪ್‌ ಸಿಂಹ ಅವರು ಯದುವೀರ್ ಒಡೆಯರ್‌ ಅವರಿಗಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ನಿಜವಾದರೂ ಅವರಲ್ಲಿರುವ ಬೇಸರ, ಟಿಕೆಟ್‌ ಸಿಗದಿರುವ ನೋವು ದೂರವಾಗಿಲ್ಲ ಎಂಬಂತೆ ಕಾಣುತ್ತಿದೆ.

ಯದುವೀರ್‌ ಅವರಿಗೆ ಟಿಕೆಟ್‌ ಘೋಷಣೆ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಭರ್ಜರಿ ಪ್ರಚಾರ ಮಾಡುವುದಾಗಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದರು. ಆದರೆ ಪ್ರಚಾರದ ಸಭೆಗಳಲ್ಲೆಲ್ಲಾ ತಾವು ಮಾಡಿದ ಸಾಧನೆಗಳನ್ನೇ ಹೇಳುತ್ತಾ ತಮಗೆ ಟಿಕೆಟ್ ಸಿಗದಿರುವುದಕ್ಕೆ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಹಲವರ ಆರೋಪವಾಗಿತ್ತು. ಅದಕ್ಕೆ ಪುಷ್ಠಯಂಬಂತೆ ಕಾರ್ಯಕ್ರಮದ ಮಧ್ಯದಲ್ಲಿಯೇ ವಿಜಯೇಂದ್ರ ಮತ್ತು ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿಯೂ ಸಹಾ ಸಭೆ ತೊರೆದ ಸಂಸದ ಪ್ರತಾಪ್‌ ಸಿಂಹರ ನಡೆ ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

ಅಷ್ಟಕ್ಕೂ ಅವರು ಹೀಗೆ ಮಾಡಿದ್ದಾದರೂ ಯಾಕೆ? ಮತ್ತು ವಿಜಯೇಂದ್ರ ಅವರ ಬಳಿ ಯಾವ ಕಾರಣ ನೀಡಿ ತೆರಳಿದರು ಎಂಬುದು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.

Tags: