Mysore
28
scattered clouds

Social Media

ಶನಿವಾರ, 18 ಏಪ್ರಿಲ 2026
Light
Dark

ಐಪಿಎಲ್‌ 2024: ಆರ್‌ಸಿಬಿಯ ಅತಿಹೆಚ್ಚು ರನ್‌ ಬೃಹತ್‌ ದಾಖಲೆ ಮುರಿದ ಸನ್‌ರೈಸರ್ಸ್‌

ಹೈದರಾಬಾದ್:‌ ಇಲ್ಲಿನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 8ನೇ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ಆಯ್ದುಕೊಂಡು ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಸನ್‌ರೈಸರ್ಸ್‌ ಹೈದರಾಬಾದ್‌ ತನ್ನ ಬ್ಯಾಟ್ಸ್‌ಮನ್‌ಗಳ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 277 ರನ್‌ ಕಲೆಹಾಕಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 278 ರನ್‌ಗಳ ದಾಖಲೆಯ ಗುರಿಯನ್ನು ನೀಡಿತು. ಈ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನ್‌ ಬಾರಿಸಿದ ತಂಡ ಎಂಬ ದಾಖಲೆ ನಿರ್ಮಿಸಿತು. ಈ ಮೂಲಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ 11 ವರ್ಷಗಳ ಹಿಂದಿನ ಬೃಹತ್‌ ದಾಖಲೆಯನ್ನು ಮುರಿಯಿತು.

ಸನ್‌ರೈಸರ್ಸ್‌ ಹೈದರಾಬಾದ್:‌ ತಂಡದ ಪರ ಮಯಾಂಕ್‌ ಅಗರ್ವಾಲ್‌ ಮತ್ತು ಟ್ರಾವಿಸ್‌ ಹೆಡ್‌ ಆರಂಭಿಕರಾಗಿ ಕಣಕ್ಕಿಳಿದರು. ಮಯಾಂಕ್‌ 11 (13) ರನ್‌ಗೆ ಔಟ್‌ ಆದರು. ಬಳಿಕ ಕಣಕ್ಕಿಳಿದ ಎಲ್ಲಾ ನಾಲ್ವರೂ ಬ್ಯಾಟ್ಸ್‌ಮನ್‌ಗಳೂ ವಿಶ್ವರೂಪ ತೋರಿದರು. ಆರಂಭದಿಂದ ಅಂತ್ಯದವರೆಗೂ ಮುಂಬೈ ಇಂಡಿಯನ್ಸ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಟ್ರಾವಿಸ್‌ ಹೆಡ್ 24 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 62 ರನ್‌ ಬಾರಿಸಿದರೆ, ಅಭಿಷೇಕ್‌ ಶರ್ಮಾ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್‌ ಸಹಿತ 63 ರನ್‌ ಬಾರಿಸಿದರು. ಏಡನ್‌ ಮಾರ್ಕ್ರಮ್‌ 28 ಎಸೆತಗಳಲ್ಲಿ ಅಜೇಯ 42 ರನ್‌ ಬಾರಿಸಿದರು ಮತ್ತು ಹೆನ್ರಿಕ್‌ ಕ್ಲಾಸೆನ್‌ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್‌ ಸಹಿತ ಅಜೇಯ 80 ರನ್‌ ಬಾರಿಸಿ ಅಬ್ಬರಿಸಿದರು.

ಮುಂಬೈ ಇಂಡಿಯನ್ಸ್‌ ಪರ ಜಸ್‌ಪ್ರೀತ್‌ ಬುಮ್ರಾ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳೂ 11ಕ್ಕಿಂತ ಹೆಚ್ಚಿನ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿ ದುಬಾರಿಯಾದರು. ಹಾರ್ದಿಕ್‌ ಪಾಂಡ್ಯ, ಗೆರಾಲ್ಡ್‌ ಸೋಟ್ಜೆ ಹಾಗೂ ಪಿಯೂಷ್‌ ಚಾವ್ಲಾ ತಲಾ ಒಂದೊಂದು ವಿಕೆಟ್‌ ಪಡೆದರು.

 

ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ ದಾಖಲಿಸಿದ ತಂಡಗಳು – ಟಾಪ್‌ 3
1. ಸನ್‌ರೈಸರ್ಸ್‌ ಹೈದರಾಬಾದ್‌ vs ಮುಂಬೈ ಇಂಡಿಯನ್ಸ್‌ ( 27 ಮಾರ್ಚ್ 2024 ) – 277/3
2. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಪುಣೆ ವಾರಿಯರ್ಸ್‌ ( 23 ಏಪ್ರಿಲ್‌ 2013 ) – 263/5
3. ಲಕ್ನೋ ಸೂಪರ್‌ ಜೈಂಟ್ಸ್‌ vs ಪಂಜಾಬ್‌ ಕಿಂಗ್ಸ್‌ ( 28 ಏಪ್ರಿಲ್‌ 2023 ) – 257/5

Tags:
error: Content is protected !!