Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಶಿವರಾಜ್‌ಕುಮಾರ್‌ ಸಿನಿಮಾಗಳ ಮೇಲೆ ನಿರ್ಬಂಧಕ್ಕೆ ಮನವಿ; ಚುನಾವಣಾ ಆಯೋಗ ಹೇಳಿದ್ದಿಷ್ಟು

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್‌ ಸ್ಪರ್ಧಿಸುತ್ತಿದ್ದಾರೆ. ನಟ ಶಿವರಾಜ್‌ಕುಮಾರ್‌ ತಮ್ಮ ಪತ್ನಿ ಪರ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ನಡೆ ವಿರುದ್ಧ ಕೂಗು ಕೇಳಿಬಂದಿತ್ತು.

ಶಿವರಾಜ್‌ಕುಮಾರ್‌ ನಟನೆಯ ಯಾವುದೇ ಚಿತ್ರಗಳು ಹಾಗೂ ಜಾಹೀರಾತುಗಳನ್ನು ದೂರದರ್ಶನ ಹಾಗೂ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬಾರದು ಮತ್ತು ದಿನಪತ್ರಿಕೆಗಳಲ್ಲಿಯೂ ಸಹ ಶಿವರಾಜ್‌ಕುಮಾರ್‌ ಇರುವ ಜಾಹೀರಾತುಗಳನ್ನು ಬಳಸಬಾರದಂತೆ ನಿಷೇಧ ಹೇರಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಕೌಟಿಲ್ಯ ರಘು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದರು.

ಈ ಮನವಿಗೆ ಸ್ಪಂದಿಸಿರುವ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ಶಿವರಾಜ್‌ಕುಮಾರ್‌ ಸಿನಿಮಾಗಳ ಮೇಲೆ ನಿಷೇಧ ಹೇರುವುದು ಸಾಧ್ಯವಿಲ್ಲ ಎಂದಿದ್ದಾರೆ. “ಚುನಾವಣೆಗೆ ಸ್ಪರ್ಧಿಸುವ ಅಥವಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಕಲಾವಿದರ ಚಿತ್ರಗಳ ಪ್ರದರ್ಶನವನ್ನು ಸರ್ಕಾರದ ಹಣದಿಂದ ನಡೆಸಲ್ಪಡುವ ದೂರದರ್ಶನದಲ್ಲಿ ಮಾತ್ರ ನಾವು ನಿಷೇಧಿಸಬಹುದು. ಖಾಸಗಿ ಟಿವಿ ಚಾನೆಲ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ವಾಣಿಜ್ಯ ಪ್ರದರ್ಶನಗಳನ್ನು ನಿಲ್ಲಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

Tags:
error: Content is protected !!