ಬೆಂಗಳೂರು : ಹೆಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಇಂದು ಭೇಟಿ ನೀಡಿ ಕುಮಾರಸ್ವಾಮಿ ಅವರಿಗೆ ಆಶಿರ್ವದಿಸಿದ್ದಾರೆ.
ಈ ವೇಳೆ, ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ ಸ್ವಾಮಿಗಳು, ಬೇಗ ಗುಣ ಮುಖರಾಗುವಂತೆ ಆಶಿರ್ವದಿಸಿದರು.
ಶ್ರೀಗಳ ಭೇಟಿ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ಗುರುಗಳ ದರ್ಶನ ಭಾಗ್ಯ ಇಂದು ನನ್ನ ಮನೆಯಲ್ಲಿಯೇ ದೊರೆತಿದ್ದು ನನ್ನ ಭಾಗ್ಯವೇ ಸರಿ.
ಇತ್ತೀಚೆಗೆ ನಾನು 3ನೇ ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರ ಬಗ್ಗೆ ಹಾಗೂ ನನ್ನ ಆರೋಗ್ಯದ ಕುರಿತಾಗಿ ಪರಮಪೂಜ್ಯರು ವಿಚಾರಿಸಿ ಆಶೀರ್ವದಿಸಿದರು ಎಂದು ಭಾವನಾತ್ಮಕ ನುಡಿಗಳನ್ನು ಬರೆದುಕೋಂಡಿದ್ದಾರೆ.