Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕಾಂಗ್ರೆಸ್‌ ಒಕ್ಕಲಿಗ ವಿರೋಧಿ ಪಕ್ಷ: ಎಲ್‌.ನಾಗೇಂದ್ರ ಕಿಡಿ

ಮೈಸೂರು: ಯಾರೋ ಇಬ್ಬರು ಮೂವರು ಪಕ್ಷ ತೊರೆದು ಹೋದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಪಕ್ಷಕ್ಕೆ ಸಾವಿರಾರು ಮಂದಿ ಬರುವವರಿದ್ದಾರೆ ಎಂದು ಮಾಜಿ ಶಾಸಕ ಎಲ್‌. ನಾಗೇಂದ್ರ ಹೇಳಿದ್ದಾರೆ.

ಮಾಜಿ ಮುಡಾ ಅಧ್ಯಕ್ಷ ಎಚ್‌.ವಿ ರಾಜೇಂದ್ರ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿಕೊಳ್ಳುತ್ತಿರುವ ಸಂಬಂಧ ಅವರು ಈರೀತಿಯ ಪ್ರತಿಕ್ರಿಯ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮಳೊಂದಿಗೆ ಮಾತನಾಡಿದ ಅವರು, ಎಚ್‌.ವಿ ರಾಜೇಂದ್ರ ಅವರು ಪಕ್ಷ ತೊರೆಯುವುದರಿಂದ ನಮಗೆ ಯಾವುದೇ ತೊಂದರೆಯಿಲ್ಲ ಹಾಗೂ ಪಕ್ಷಕ್ಕೂ ಯಾವುದೇ ಡ್ಯಾಮೆಜ್‌ ಆಗುವುದಿಲ್ಲ ಎಂದು ತಿಳಿಸಿದರು.

ಅವರು ನಮ್ಮ ಪಕ್ಷಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಅವರ ಮನವೊಲಲಿಸುವ ಕೆಲಸ ನಾವು ಮಾಡುವುದಿಲ್ಲ. ವಿಧಾನಸಭಾ ಚುನಾವಣೆ ವೇಳೆ ನಮ್ಮ ಪಕ್ಷದ ವಿರುದ್ಧವಾಗಿ ಅವರು ಕೆಲಸ ಮಾಡಿದ್ದರು. ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಸಹಜ ಎಂದು ವಿವರಿಸಿದರು.

ಇನ್ನೂ ಮೈಸೂರು-ಕೊಡಗು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಲಕ್ಷ್ಮಣ್‌ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್‌ ಒಕ್ಕಲಿಗ ವಿರೋಧಿ ಪಕ್ಷವಾಗಿದೆ. ಒಕ್ಕಲಗರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ 41 ವರ್ಷ ಸಮಯ ತೆಗೆದುಕೊಂಡಿದೆ. ಲಕ್ಷ್ಮಣ್‌ ಬಿಟ್ಟರೇ ಕಾಂಗ್ರೆಸ್‌ನಲ್ಲಿ ಬೇರಾರೂ ಇರಲಿಲ್ಲವಾ. ಇದಕ್ಕಿಂತ ಮುಂಚೆ ಯಾಕೆ ಕಾಂಗ್ರೆಸ್‌ ಒಕ್ಕಲಿಗ ಸಮುದಾಯಕ್ಕೆ ಅವಕಾಶ ನೀಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags: