Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕೆಎಸ್‌ಓಯು ಪಿಎಚ್‌ಡಿ ಪರೀಕ್ಷೆ ಕೀ-ಉತ್ತರಗಳೇ ತಪ್ಪು?; ಮರು ಪರೀಕ್ಷೆ ಯಾವಾಗ?

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಓಯು) 2023-24ನೇ ಸಾಲಿನ (ಜನವರಿ ಆವೃತ್ತಿ) ಪತ್ರಿಕೋದ್ಯಮ ವಿಷಯದ ಪಿ.ಹೆಚ್.ಡಿ ಪರೀಕ್ಷೆಯ CET Series-D ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ತಪ್ಪು ಕೀ-ಉತ್ತರಗಳನ್ನು ಪ್ರಕಟಿಸಿ ಎಂದು ಹರೀಶ್‌ ಕುಮಾರ್‌ ಎಂಬುವವರು ದೂರು ನೀಡಿದ್ದಾರೆ.

ಪಿಎಚ್‌ಡಿ ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದಂತೆ ಎನ್. ಹರೀಶ್ ಕುಮಾರ್ ಎಂಬುವವರು ಮುಕ್ತ ವಿವಿಗೆ ಪತ್ರ ಬರೆಯುವ ಮೂಲಕ ಪರೀಕ್ಷಾ ಲೋಪವನ್ನು ಬಿಚ್ಚಿಟ್ಟಿದ್ದಾರೆ.

ಇದೇ ಮಾ.17 ರಂದು ಪತ್ರಿಕೋದ್ಯಮ ವಿಷಯದಲ್ಲಿ ಪಿ.ಹೆಚ್.ಡಿ ಪ್ರವೇಶ ಪರೀಕ್ಷೆ ನಡೆಸಲಾಗಿದ್ದು, ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಕೆಎಸ್‌ಓಯು ಅಂತರ್ಜಾಲದಲ್ಲಿ ಪ್ರಕಟಿಸಿದೆ. ಆದರೆ ಪ್ರಕಟಿಸಿರುವ CET Series-D (ಪತ್ರಿಕೋದ್ಯಮ ವಿಷಯ) ಕೀ-ಉತ್ತರಗಳು ತಪ್ಪಾಗಿರುವುದು ಹರೀಶ್‌ ಗಮನಕ್ಕೆ ಬಂದಿದೆ.

ಕೆ.ಎಸ್.ಒ.ಯು ಅಂತರ್ಜಾಲದಲ್ಲಿ ತಪ್ಪಾಗಿ ಪ್ರಕಟಿಸಿರುವ ಕೀ-ಉತ್ತರಗಳನ್ನು ಪ್ರಶ್ನೆ ಸಂಖ್ಯೆ ಸಮೇತ ಪಟ್ಟಿ ಮಾಡಿ ವಿವರ ಸಹಿತ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿವಿಯಂತ ಉನ್ನತ ಸಂಸ್ಥೆಯೇ ಈ ರೀತಿ ಪ್ರಶ್ನೆಗಳಿಗೆ ತಪ್ಪು ಕೀ-ಉತ್ತರಗಳನ್ನು ಪ್ರಕಟ ಮಾಡಿರುವುದು ದಿಗ್ಧಮೆ ತಂದಿದೆ ಎಂದು ದೂರುದಾರ ಹರೀಶ್‌ ಆತಂಕ ವ್ಯಕ್ತಪಡಿಸಿದ್ದಾರೆ.

Tags: