ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡುವುದರ ಬಗ್ಗೆ ಇಂದು ಸ್ವತಃ ಕುಮಾರಸ್ವಾಮಿ ಅವರೇ ಮನಬಿಚ್ಚಿ ಮಾತನಾಡುತ್ತಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನ ಹಾಗೂ ಪಕ್ಷದ ಕಾರ್ಯಕರ್ತರು ಒಗ್ಗಡ್ಡಾಗಿ ಕಳೆದ ಎರಡು ತಿಂಗಳಿಂದಲೇ ಕುಮಾರಸ್ವಾಮಿ ಅವರೆ ಅಭ್ಯರ್ಥಿಯಾಗಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದರು.
ಕೆಲವು ದಿನಗಳ ಹಿಂದೆ ಪಕ್ಷದ ಸಭೆ ಮಾಡಿದಾಗಲು, ಕುಮಾರಣ್ಣ ಅಭ್ಯರ್ಥಿಯಾಗಬೇಕು ಇಲ್ಲ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಬೇಕು ಎಂದು ಒತ್ತಾಯ ಮಾಡಿದ್ದರು. ಈ ಹಿನ್ನಲೆ ಇಂದು ಮಂಡ್ಯ ಹಾಗೂ ಮೈಸೂರು ಜೆಡಿಎಸ್ ಮುಖಂಡರ ಸಾಭೆಯನ್ನು ಕರೆದಿದ್ದೇವೆ ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುತ್ತದೆ ಎಂದರು.
ಪಕ್ಷದ ಕೋರ್‌ಕಮಿಟಿ ಸಭೆ ಬಳಿಕ ಕುಮಾರಸ್ವಾಮಿ ಅವರು ಮನಬಿಚ್ಚಿ ಮಾತನಾಡುತ್ತಾರೆ ಎಂದು ತಿಳಿಸಿದರು.
ಗೆಲ್ಲುವ ಮೊದಲ ಕ್ಷೇತ್ರ ಕೋಲಾರ !: ಕೋಲಾರ ಕ್ಷೇತ್ರದ ವಿಚಾರದಲ್ಲಿ ಯಾವುದೇ ಗೊಂದಲಗಳೇ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದಾರೆ. ಕೋಲರದ ಎಂಪಿ ಮುನಿಸ್ವಾಮಿ ಅವರೇ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಗೆಲುವಿನ ಮೊದಲ ಕ್ಷೇತ್ರವೇ ಕೋಲಾರ ಆಗುತ್ತಿದೆ. ಕೇವಲ ಮೂರು ದಿನದಲ್ಲಿ ಎಲ್ಲರ ಮನಸ್ಸು ಪರಿವರ್ಥನೆಯಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.