Mysore
29
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಯುವಜನತೆ ಹೆಚ್ಚು ರಾಜಕೀಯಕ್ಕೆ ಬರಲಿ: ಎಂ.ಎನ್.ನಟರಾಜ್

ಮೈಸೂರು: ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ರಾಜಕೀಯಕ್ಕೆ ಬರಬೇಕಿದೆ ಎಂದು ರಾಷ್ಟ್ರೀಯ ಯುವಜನ ಸಬಲೀಕರಣ ಇಲಾಖೆ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ಹೇಳಿದರು.
ಮೈಸೂರಿನ ನೆಹರು ಯುವಕೇಂದ್ರ, ಶೇಷಾದ್ರಿ ಪುರಂ ಪದವಿ ಪೂರ್ವ ಕಾಲೇಜು ಮೇಟಗಳ್ಳಿ ರಾಷ್ಟ್ರೀಯ ಸೇವಾ ಯೋಜನಾ ಕೇಂದ್ರವು ಜಿಲ್ಲಾ ಮಟ್ಟದ ಯೂತ್ ಪಾರ್ಲಿಮೆಂಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಲೋಕಸಭಾ ಚುನಾವಣಾ ಸಮಯ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕಿದೆ. ನೀವೂ ಸುಭದ್ರ ಭಾರತಕ್ಕೆ ಜಾಗೃತಿಯಿಂದ ಮತದಾನ ಮಾಡಬೇಕಿದೆ. ಜತೆಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಹೆಚ್ಚಿನ ಮಂದಿ ರಾಜಕೀಯಕ್ಕೆ ಬರುವ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.
ಸ್ವೀಪ್ ಜಿಲ್ಲಾ ಮಟ್ಟದ ಅಧಿಕಾರಿ ರೇಖಾ ಜೆ.ಶೆಟ್ಟಿ ಅವರು ಚುನಾವಣಾ ನೀತಿ ವಿಧಿ ಬೋಧನೆ ಮಾಡಿದರು. ಜತೆಗೆ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಮತದಾನ ಹಾಗೂ ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಇದರಲ್ಲಿ ಸಂತಸದಿಂದ ಪಾಲ್ಗೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ಜಿಲ್ಲಾ ಯುವಜನ ಅಧಿಕಾರಿ ಅಭಿಷೇಕ್ ಚಾವರೆ, ಎನ್ ವೈಕೆಎಸ್ ಲೆಕ್ಕಾಧಿಕಾರಿ ಸತೀಶ್ ಪಡೋಳ, ತಾಲ್ಲೂಕು ಸಂಯೋಜನಾಧಿಕಾರಿ ಲಕ್ಷ್ಮಿಕಾಂತ್, ಕೃಪಲಾನಿ, ಇಂಗ್ಲಿಷ್ ಪ್ರಾಧ್ಯಾಪಕ ಯೋಗೇಶ್, ಶೇಷಾದ್ರಿ ಪುರಂ ಪದವಿ ಪೂರ್ವ ಮೇಟಗಳ್ಳಿ ಕಾಲೇಜು ಪ್ರಾಂಶುಪಾಲ ಡಾ.ಕೆ.ಸೌಮ್ಯ ಈರಪ್ಪ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಆರ್.ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು.
Tags: