ಮೈಸೂರು : ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ನೀಡಿರುವ ಯೋಜನೆಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಮಾಜಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಹೊರ ಬಂದ ಬಳಿಕ, ಮಾ.೨೭ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿರುವ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಯಜನೆಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ನೀಡಿರುವ ಬಡವರ, ಮಹಿಳೆಯರ ಹಾಗೂ ಹಿಂದುಳಿದ- ಶೋಷಿತರ ಪರವಾದ ಯೋಜನೆಗಳಿಗೆ ಇನ್ನಷ್ಟು ಪುಷ್ಠಿ ನೀಡುವುದು ನನ್ನ ಆಸೆ ಎಂದರು.
ಅಷ್ಟೇ ಅಲ್ಲದೇ ತವರು ಜಿಲ್ಲೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ʼಕೈʼ ಬಲಪಡಿಸಬೇಕು. ಪಕ್ಷ ಸಂಘಟನೆಗಾಗಿ ಇನ್ನಷ್ಟು ದುಡಿಯುವ ಉದ್ದೇಶದಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಎಂದು ಅಭಿಪ್ರಾಯ ತಿಳಿಸಿದರು.
ಈ ಬಾರಿ ಮೈಸೂರು -ಕೊಡಗು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಅವರ ಗೆಲುವಗಾಗಿ ಶ್ರಮ ಪಡುವುದಾಗಿ ತಿಳಿಸಿದರು.
ಬಿಎಸ್‌ವೈ ಪ್ರಶ್ನಾತೀತ ನಾಯಕ : ಬಿ.ಎಸ್.ಯಡೀಯೂರಪ್ಪ ಅವರು ಪಕ್ಷಾತೀತ ಹಾಗೂ ಪ್ರಶ್ನಾತೀತವಾದಂತ ನಾಯಕ. ಯಾವುದೇ ಪಕ್ಷದವರಾದರೂ ಅವರನ್ನು ನಾಯಕರೆಂದು ಒಪ್ಪುತ್ತಾರೆ.
ನಾನು ಸದಾ ಗೌರವಿಸುವ ನಾಯಕರಲ್ಲಿ ಮುಂಚೂಣಿಯಲ್ಲಿ ನಿಂತಿದ್ದ, ನಿಂತಿರುವ ಹಾಗೂ ಸದಾ ನಿಲ್ಲುವ ನಾಯಕ ಯಡಿಯೂರಪ್ಪ ಎಂದು ತಿಳಿಸಿದರು.