Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯದುವೀರ್‌ ನೇತೃತ್ವದಲ್ಲಿ ಮೈಸೂರು ಇನ್ನಷ್ಟು ಅಭಿವೃದ್ಧಿ ಕಾಣಲಿದೆ: ರಾಧಾ ಮೊಹನ್‌ ದಾಸ್‌

ಮೈಸೂರು: ಯದುವೀರ್‌ ಪ್ರೌಢಿಮೆ ಹೊಂದಿರುವ ಯುವ ನಾಯಕರಾಗಿದ್ದಾರೆ. ಮೈಸೂರಿನ ಅಭಿವೃದ್ಧಿ ಬಗ್ಗೆ ಅವರು ಸಾಕಷ್ಟು ಕಲ್ಪನೆಯನ್ನು ಹೊಂದಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ತಿಳಿಸಿದರು.

ನಗರದ ಸರಸ್ವತಿಪುರಂ ವಿಜಯವಿಠಲ ಎಜುಕೇಷನಲ್ ಟ್ರಸ್ಟ್ ಇನ್ಸ್ಟಿಟ್ಯೂಟ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕರ ಸಂವಾದದಲ್ಲಿ ಅವರು ಮಾತನಾಡಿದರು.

ಇದು ಅವರಿಗೆ ರಾಜಕೀಯ ಪುನರ್ಜನ್ಮದ ಅವಕಾಶ. ಮೈಸೂರು ಅರಸರು ಆರೋಗ್ಯ, ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಯುವ ಸಂಸದರ ನೇತೃತ್ವದಲ್ಲಿ ಮೈಸೂರು ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯದುವೀರ್ ಅವರನ್ನು ಈಗಾಗಲೇ ಸಂಸದ ಎಂದು ಜನರು ತೀರ್ವಾನಿಸಿದ್ದಾರೆ. ಈಗ ಜನರ ಜವಾಬ್ದಾರಿ ಹೆಚ್ಚಿದೆ. ಈ ಚುನಾವಣೆ ಮೈಸೂರಿನ ರಾಜರನ್ನು ನಾಲ್ಕೈದು ಲಕ್ಷ ಅಂತರದಿಂದ ಗೆಲ್ಲಿಸಬೇಕು. ಯದುವೀರ್‌ ಅವರಿಂದ ಇಡೀ ಕರ್ನಾಟಕ ಅಭಿವೃದ್ಧಿ ಆಗಬೇಕು ಎಂದು ಮನವಿ ಮಾಡಿದರು.

ಬಳಿಕ ಮಾತನಾಡಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ನಮ್ಮ ಪಕ್ಷ ಜಾತ್ಯಾತೀತವಾಗಿ ಕೆಲಸ ಮಾಡುತ್ತಿದೆ ಅದರಲ್ಲಿ ಯಾವ ಸಂಶಯವಿಲ್ಲ. ನಾನು ಜಾತಿ ನೋಡುವುದಿಲ್ಲ ಎಲ್ಲರೂ ಒಂದೇ ಎಂಬ ಮನೋಭಾವನೆ ಇಟ್ಟುಕೊಂಡು ಮತ ಯಾಚಿಸುತ್ತೇನೆ ಎಂದು ಹೇಳಿದರು.

ಮೈಸೂರು ಆರ್ಥಿಕವಾಗಿ ಸಬಲ ಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮವನ್ನು ಒಳಗೊಂಡಂತೆ ಅರ್ಗಾನಿಕ್ ಡೆವಲಪೆಂಟ್, ಸ್ವಚ್ಚತೆಗಾಗಿ ಬದಲಾವಣೆಯನ್ನು ತರಬೇಕಿರುವ ಬಯಕೆಯನ್ನು ಹೊಂದಿದ್ದೇನೆ. ಅಲ್ಲದೇ ಮೈಸೂರಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಲಿಂಗಾಬುದಿ ಕೆರೆ ಹಾಳಾಗುತ್ತಿದೆ. ಕೆರೆಗಳ ಸಂರಕ್ಷಣೆಗಾಗಿ ವಾರಾಂತ್ಯ ಸ್ವಚ್ಚತೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಹೆರಿಟೇಜ್ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಸೇರಿದಂತೆ ಕ್ರಮ ವಹಿಸಿ ಜೈಪುರ ಮಾದರಿಲ್ಲಿ ಮೈಸೂರು ಮೂಲ ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ವಿವರಿಸಿದರು.

Tags: