Mysore
28
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಜಾಕಿ ಜಾತ್ರೆ ಜೋರು: ಮರುಬಿಡುಗಡೆ ಟ್ರೆಂಡ್‌ನಲ್ಲಿ ದಾಖಲೆ ಬರೆದ ಅಪ್ಪು ಫ್ಯಾನ್ಸ್‌

ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಸೂಪರ್ ಹಿಟ್‌ ಚಿತ್ರ ಜಾಕಿ 14 ವರ್ಷಗಳ ಬಳಿಕ ಮರುಬಿಡುಗಡೆಯಾಗಿದೆ. ಈ ಮೂಲಕ ಅಪ್ಪು ಅಗಲಿಕೆಯ ಬಳಿಕ ಪುನೀತ್‌ ನಟನೆಯ ಚಿತ್ರಗಳನ್ನು ಮರು ಬಿಡುಗಡೆ ಮಾಡಬೇಕೆಂಬ ಅಭಿಮಾನಿಗಳ ಆಸೆ ಈಡೇರಿದಂತಾಗಿದೆ.

ಅದರಲ್ಲೂ ಚಿತ್ರಕ್ಕೆ ವ್ಯಕ್ತವಾಗಿರುವ ಅಭೂತಪೂರ್ವ ಪ್ರತಿಕ್ರಿಯೆ ಪುನೀತ್‌ ನಟನೆಯ ಇನ್ನುಳಿದ ಚಿತ್ರಗಳನ್ನು ತೆರೆ ಮೇಲೆ ತರಲು ಉತ್ತೇಜನೆ ನೀಡಿದ್ದು, ಪುನೀತ್‌ ಚಿತ್ರ ಮಾತ್ರವಲ್ಲದೇ ಇನ್ನುಳಿದ ಸ್ಟಾರ್‌ ನಟರ ವಿಂಟೇಜ್‌ ಚಿತ್ರಗಳನ್ನು ಮರು ಬಿಡುಗಡೆ ಮಾಡುವ ಯೋಚನೆಯನ್ನು ನಿರ್ಮಾಪಕರಲ್ಲಿ ಮೂಡಿಸಿದೆ.

ಜಾಕಿ ಚಿತ್ರದ ಒಟ್ಟು 14 ಸಾವಿರ ಟಿಕೆಟ್‌ಗಳು ಮುಂಗಡ ಬುಕಿಂಗ್‌ ಮೂಲಕ ಮಾರಾಟವಾಗಿದ್ದು, ಇದು ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಚಿತ್ರಗಳಿಗಿಂತ ಹೆಚ್ಚಿನ ಮಟ್ಟದ್ದಾಗಿದೆ. ಇನ್ನು ಚಿತ್ರಮಂದಿರಗಳ ಪರದೆಗಳ ಮುಂದೆ ಹೊಸ ಚಿತ್ರಕ್ಕೆ ಇರುವಂತಹ ಸೆಲಬ್ರೇಷನ್‌ ಈ ಚಿತ್ರಕ್ಕೂ ದಕ್ಕಿದೆ. ಎವರ್‌ಗ್ರೀನ್‌ ಹಿಟ್‌ ಹಾಡುಗಳನ್ನು ಚಿತ್ರಮಂದಿರದಲ್ಲಿ ಹಾಡುವ ಮೂಲಕ ಅಭಿಮಾನಿಗಳು ಕನ್ಸರ್ಟ್‌ ರೀತಿ ಜಾಕಿ ಚಿತ್ರವನ್ನು ಎಂಜಾಯ್‌ ಮಾಡಿದ್ದಾರೆ. ಮತ್ತೊಮ್ಮೆ ಅಪ್ಪುವನ್ನು ಸಂಭ್ರಮಿಸಿದ್ದಾರೆ. ಹೀಗೆ ದೊಡ್ಡದಾಗಿ ಮರುಬಿಡುಗಡೆಯಾಗುವ ಮೂಲಕ ಜಾಕಿ ದಾಖಲೆಗಳ ಪುಟ ಸೇರಿದೆ.

Tags: