Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಬಿಗ್‌ಬಾಸ್‌ ಖ್ಯಾತಿಯ ತುಕಾಲಿ ಸಂತೋಷ್‌ ಕಾರು ಅಪಘಾತ; ಆಟೋ ಚಾಲಕ ಸಾವು

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಬಿಗ್​ ಬಾಸ್ ಸೀಸನ್‌​10 ರ ರಿಯಾಲಿಟಿ ಶೋನಲ್ಲಿ ಖ್ಯಾತಿಯನ್ನು ಗಳಿಸಿದ್ದ ಸ್ಪರ್ಧಿ ತುಕಾಲಿ ಸಂತೋಷ್ ಅವರ ಹೊಸ ಕಾರು ಅಪಘಾತಕ್ಕೀಡಾಗಿದ್ದು, ಆಟೋ ಚಾಲಕ ಸಾವನ್ನಪ್ಪಿದ್ದಾರೆ.

ತುಮಕೂರಿನ ಕುಣಿಗಲ್‌ ತಾಲೂಕಿನ ಹೊನ್ನೇನಹಳ್ಳಿ ಬಳಿ ತುಕಾಲಿ ಸಂತೋಷ್‌ ಕಾರಿಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಕಾರು ಹಾಗೂ ಆಟೋ ಜಖಂಗೊಂಡಿದ್ದವು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

Tags: