ಮೈಸೂರು: ತೀವ್ರ ಕುತೂಹಲಕ್ಕೆ ದಾರಿ ಮಡಿಕೊಟ್ಟಿದ್ದ ಮೈಸೂರು ಲೋಕಸಭಾ ಬಿಜೆಪಿ ಟಿಕೆಟ್ ರಾಜವಂಶಸ್ಥ ಯದುವೀರ್ ಅವರ ಪಾಲಾದ ನಂತರ ಇದೀಗ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಹುಟುಕಾಟ ಶುರುವಾಗಿದೆ.
ರಾಜರ ವಿರುದ್ಧ ಯಾರನ್ನು ನಿಲ್ಲಿಸಬೇಕೆಂಬುದು ಸದ್ಯ ತಲೆನೋವಾಗಿ ಪರಿಣಮಿಸಿದೆ. ಇದರ ಜೊತೆಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಿದರೆ ನಾನು ಸ್ಪರ್ಧೆ ಮಾಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ನಾನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಕಾಂಗ್ರೆಸ್‌ನಿಂದ ಟಿಕೆಟ್ಗೆ ಬೇಡಿಕೆ ಇಟ್ಟಿದ್ದೇನೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತನಾಡಿರುವುದಾಗಿ ಅವರು ಹೇಳಿದರು.
ಸಿದ್ದರಾಮಯ್ಯ ನೀವು ಬಿಜೆಪಿಯಲ್ಲಿ ಇದ್ದೀರಾ ಹೇಗೆ ಅಂತಾ ಕೇಳಿದರು. ಅದಕ್ಕೆ ನಾನು ಎಲ್ಲವನ್ನೂ ವಿವರಿಸಿದ್ದೇನೆ. ನಾನು ಟೆಕ್ನಿಕಲಿ ಬಿಜೆಪಿಯಲ್ಲಿದ್ದೇನೆ. ನನಗೆ ಟಿಕೆಟ್ ನೀಡಿದರೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದೇನೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ನೋಡೋಣ ಅಂತಾ ಹೇಳಿದ್ದಾರೆ.
ನಾನು ಮೈಸೂರು-ಕೊಡಗು ಕ್ಷೇತ್ರದ ಸಂಸದನಾಗಿದ್ದ ವೇಳೆ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಿಂದೆ ಸಚಿವನಾಗಿದ್ದಾಗ ಬಿಸಿಯೂಟ ಯಶಸ್ವಿನಿ ಯೋಜನೆ ಜಾರಿ ಮಾಡಿದ್ದೇನೆ. ಚುನಾವಣೆಗೆ ಹಣ ಜಾತಿಯಿಂದ ಮಾತ್ರವಲ್ಲ ಅನುಭವದ ಅವಶ್ಯಕತೆ ಇದೆ ಎಂದರು. ಇದೇ ವೇಳೆ ಕಾಂಗ್ರೆಸ್ ಟಿಕೆಟ್ ನೀಡಿದರೇ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಎಚ್. ವಿಶ್ವನಾಥ್ ವಿವರಿಸಿದರು.