Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕ್ರೀಡಾ ಸ್ಫೂರ್ತಿ ಎನ್ನುವುದು ನಮ್ಮ ಕೆಲಸದ ವೈಖರಿಯನ್ನು ತೋರಿಸುತ್ತದೆ: ಡಾ. ಕೆ.ವಿ ರಾಜೇಂದ್ರ

ಮೈಸೂರು: ಅಧಿಕಾರಿಗಳು ತಮ್ಮ ಪ್ರತಿಭೆಗಳನ್ನು ತೋರಿಸಲು ಈ ಕ್ರೀಡಾಕೂಟ ಒಳ್ಳೆಯ ಸಂದರ್ಭ. ಕ್ರೀಡಾ ಸ್ಫೂರ್ತಿ ಎನ್ನುವುದು ನಮ್ಮ ಕೆಲಸದ ವೈಖರಿಯನ್ನು ತಿಳಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಹೇಳಿದರು.

ಇಂದು ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮೈಸೂರು ಜಿಲ್ಲಾ ಮಟ್ಟದ ನೌಕರರ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಅಧಿಕಾರಿಗಳು ವರ್ಷದ 365 ದಿನಗಳೂ ಕೆಲಸ ಮಾಡುತ್ತಾರೆ. ಹಾಗಾಗಿ ಈ ರೀತಿಯ ಕ್ರೀಡಾಕೂಟವನ್ನು ನಡೆಸುವುದರಿಂದ ಅವರ ಒತ್ತಡಗಳಿಂದ ಹೊರಬಂದು ಉತ್ತಮ ಮನಸ್ಥಿತಿ ಹೊಂದಲು ನೇರವಾಗುತ್ತದೆ ಎಂದರು.

ಚುನಾವಣೆಯ ಸಂದರ್ಭವಾದ್ದರಿಂದ ಬಹಳ ಕಡಿಮೆ ಸಮಯದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಇದರಿಂದ ಚುನಾವಣಾ ಕೆಲಸದಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚಿನ ಹುಮ್ಮಸಿನಿಂದ ಪಾಲ್ಗೊಳ್ಳಲು ಸಹಾಯವಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಆನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದು ಎಲ್ಲಾ ಅಧಿಕಾರಿಗಳು ಕೆಲಸದ ಜೊತೆಗೆ ತಮ್ಮ ವಯಕ್ತಿಕ ಆರೋಗ್ಯದ ಕಡೆ ಗಮನ ಕೊಡುವುದು ಬಹಳ ಮುಖ್ಯ. ಪ್ರಸ್ತುತ ಜಿಮ್ ಗೆ ಹೋಗುವವರೇ ಹೆಚ್ಚಾಗಿ ಮರಣ ಹೊಂದುತ್ತಿದ್ದಾರೆ ಎಂಬ ಋಣಾತ್ಮಕ ಮಾಹಿತಿ ಎಲ್ಲೆಡೆ ಹರಡುತ್ತಿದ್ದು, ಆ ಯೋಚನೆಯನ್ನು ಮನಸ್ಸಿನಿಂದ ತೆಗೆದುಹಾಕಿ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ನಾವೆಲ್ಲರೂ ಒಂದು ತಂಡವಾಗಿ ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಕ್ರೀಡಾಕೂಟ ಸ್ಫೂರ್ತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಎಂ ಗಾಯಿತ್ರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ