Mysore
18
scattered clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಜನರ ಪ್ರೀತಿ ಗಳಿಸಿದ ನಾನೇ ಭಾಗ್ಯಶಾಲಿ: ಸಂಸದ ಪ್ರತಾಪ್‌ ಸಿಂಹ

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸಂಸದ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಸಿಗುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಟಿಕೆಟ್‌ ಊಹಾಪೋಹಗಳಿಗೆ ಸೋಮವಾರ ತಡರಾತ್ರಿ ಫೇಸ್‌ ಬುಕ್‌ ಲೈವ್‌ನಲ್ಲಿ ಬಂದು ಕ್ಷೇತ್ರದ ಬಗ್ಗೆ ಹಾಗೂ ತಮ್ಮ ಪ್ರಗತಿ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದರು. ಇವೆಲ್ಲದರ ನಡುವೆ ಇಂದು (ಮಾ.೧೨) ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಸದರು, ತಮಗೆ ಟಿಕೆಟ್‌ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಿಕೆಟ್‌ ಕೈ ತಪ್ಪಿರುವುದು ಇನ್ನು ಖಚಿತವಾಗಿಲ್ಲ. ಸಿಈಸಿ ಸಭೆಯ ತೀರ್ಮಾನದ ಬಗ್ಗೆ ನನಗೆ ಮಾಹಿತಿಯಿಲ್ಲ. ಈವರೆಗೆ ಟಿಕೆಟ್‌ ಸಿಗದಿರುವ ಬಗ್ಗೆ ಅಧಿಕೃತ ಘೋಷಣೆಯಾಗದಿರುವ ಕಾರಣ ನನಗೆ ಖಚಿತವಾಗಿ ಟಿಕೆಟ್‌ ಸಿಗುವ ವಿಶ್ವಾಸವಂತೂ ಇದೆ ಎಂದು ಸಂಸದ ಪ್ರತಾಪಸಸ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ನನಗೆ ಟಿಕೆಟ್‌ ಸಿಗಲಿ ಬಿಡಲಿ, ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಆಭಾರಿಯಾದ್ದೇನೆ. ಮೈಸೂರು, ಕೊಡಗು ಮಾತ್ರವಲ್ಲ ಕ್ಷೇತ್ರದಾಚೆಗೂ ಜನರು ನನಗೆ ಟಿಕೆಟ್‌ ಸಿಗುವಂತೆ ಆಗ್ರಹಿಸಿದ್ದಾರೆ. ನನ್ನ ಟಿಕೆಟ್‌ ವಿಚಾರದ ಸದ್ಯ ಟ್ರೆಂಡಿಂಗ್‌ ಆಗಿದೆ. ಇಂತಹ ಜನರ ಪ್ರೀತಿ ಗಳಿಸಿದ ನಾನು ನಿಜಕ್ಕೂ ಭಾಗ್ಯಶಾಲಿ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!