Mysore
27
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮಾಜಿ ಸಚಿವ ಗೋವಿಂದ ಕಾರಜೋಳಗೆ ಯಾವುದೇ ನಾಯಕತ್ವವಿಲ್ಲ : ಮಾಜಿ ಶಾಸಕ ಸಿ.ರಮೇಶ್ ಆಕ್ರೋಶ

  • ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮಾದಿಗ ಜನಾಂಗಕ್ಕೆ ಆದ್ಯತೆ ನೀಡುವಂತೆ ಒತ್ತಾಯ. 

ಬೆಂಗಳೂರು : ಬಿಜೆಪಿ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯ ಲಾಭವಿಲ್ಲ,ಅವರಿಗೆ ನಾಯಕತ್ವದ ಗುಣವಿಲ್ಲ ಎಂದು ಸ್ವ ಪಕ್ಷದ ಮುಖಂಡ ಮಾಜಿ ಶಾಸಕ ಸಿ.ರಮೇಶ್ ಆರೋಪಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು,ಗೋವಿಂದ ಕಾರಜೋಳ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಾವು ಹಾಗೂ ತಮ್ಮ ಪ್ರುತ್ರನಿಗೆ ಟಿಕೇಟ್ ಪಡೆದು ಸೋಲು ಕಂಡರು, ಕಳೆದ ಚುನಾವಣೆಯಲ್ಲಿ ಪಕ್ಷ ಸೋಲು ಕಾಣಲು ಗೋವಿಂದ ಕಾರಜೋಳ ಕೂಡ ಒಬ್ಬರಾಗಿದ್ದಾರೆ. ಮಾದಿಗ ಸಮುದಾಯದ ಯಾವುದೇ ಮುಖಂಡರಿಗೆ ಸ್ಥಾನಮಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.

ಹಳೆ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಕ್ಷದಿಂದ ಮಾದಿಗ ಜನಾಂಗಕ್ಕೆ ಟಿಕೇಟ್ ನೀಡಿಲ್ಲ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 15ರಿಂದ 20ಸಾವಿರ ಮತದಾರರಿದ್ದು,ಇದುವರೆಗೂ ಒಬ್ಬರು ಕೂಡ ಸಂಸದರಾಗಿಲ್ಲ.

ಆದರಿಂದ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಎಡಗೈ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ನೇಮಕ ಮಾಡುವುದರ ಮೂಲಕ ಮಾದಿಗ ಜನಾಂಗಕ್ಕೆ ರಾಜಕೀಯವಾಗಿ ನ್ಯಾಯ ಒದಗಿಸಬೇಕು, ನಾನು ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಲು ಅರ್ಹನಾಗಿದ್ದು ಮಾದಿಗ ಜನಾಂಗಕ್ಕೆ ನೀಡಿದರೆ ತಮ್ಮನ್ನು ಪರಿಗಣಿಸಬೇಕೆಂದು ತಿಳಿಸಿದರು.

ಶ್ರೀನಿವಾಸ ಪ್ರಸಾದ್ ಅವರ ಮೂರ್ನಾಲ್ಕು ಬಾರಿ ಸಂಸದರಾಗಿದ್ದಾರೆ. ಬರೀ ಅವರ ಕುಟುಂಬಕ್ಕೆ ಆದ್ಯತೆ ನೀಡುವುದು ಸರಿಯಲ್ಲ ಈ ಬಾರಿ ಎಡಗೈ ಸಮುದಾಯಕ್ಕೆ ಆದ್ಯತೆ ನೀಡುವ ಮೂಲಕ ಹೊಲೆ ಮಾದಿಗ ಸಮಾಜದವರು ಒಂದಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ