Mysore
24
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಡಿಕೆ ಶಿವಕುಮಾರ್‌ ಭಯೋತ್ಪಾದಕರ ಪರ: ಕೆ.ಎಸ್‌ ಈಶ್ವರಪ್ಪ

ಮೈಸೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಭಯೋತ್ಪಾದಕರ ಪರ ಎಂಬುದು ನಮಗೆ ಗೊತ್ತಿದೆ. ಅವರ ಮೇಲೆ ನಮಗೆ ಯಾವುದೇ ನಂಬಿಕೆಗಳಿಲ್ಲ ಎಂದು ಮೈಸೂರಿನಲ್ಲಿ ಬಿಜೆಪಿ ಹಿರಿಯ ನಾಯಕ ಕೆ.ಎಸ್‌ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಭಯೋತ್ಪಾದಕರ ಪರವಾಗಿದ್ದಾರೆ. ಅವರು ಹೇಳುವುದನ್ನು ಜನರು ಕೇಳಬೇಕು ಅಂತೇನೂ ಇಲ್ಲ. ಮೊದಲು ಅವರ ಬಾಯಿಗೆ ಬೀಗ ಹಾಕಬೇಕು. ಬಾಯಿಗೆ ಬಂದಂತೆ ಹೇಳಿಕೆಗಳನ್ನು ಉಪ ಮುಖ್ಯಮಂತ್ರಿಗಳು ನೀಡುತ್ತಿದ್ದಾರೆ ಎಂದು ಕೆ.ಎಸ್‌ ಈಶ್ವರಪ್ಪ ಅಸಮಾಧಾನ ಹೋರಹಾಕಿದ್ದಾರೆ.

ಬಳಿಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ, ಇದು ಭಯೋತ್ಪಾದಕರ ಕೃತ್ಯವಲ್ಲದೇ ಮತ್ತೇನು? ಹೋಟೆಲ್‌ ಯಾರೋ ಮಕ್ಕಳು ಪಟಾಕಿ ಅಥವಾ ಬಲೂನ್‌ ಹೊಡೆದಿಲ್ಲ. ಇದು ಬಾಂಬ್‌ ಸ್ಫೋಟವಾಗಿದ್ದು, ಇದರ ಹಿಂದೆ ಭಯೋತ್ಪಾದಕರ ಕೃತ್ಯವಿದೆ. ಈ ಕೃತ್ಯಕ್ಕೆ ಗುಪ್ತಚರ ಇಲಾಖೆಯ ವೈಫಲ್ಯವೂ ಕಾರಣವಾಗಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಒಪ್ಪಿಕೊಳ್ಳಲೇ ಬೇಕು. ಮತ್ತು ಭಯೋತ್ಪಾದಕರನ್ನು ಬೇಗ ಪತ್ತೆ ಮಾಡಿ ಶಿಕ್ಷೆ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ