Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ನೆಕ್ಸಸ್ ಸೆಂಟರ್ ಸಿಟಿ ಮಾಲ್‌ನಲ್ಲಿ ಮೂರು ದಿನಗಳ ಗೆಡ್ಡೆ-ಗೆಣಸು ಮೇಳ !

ಮೈಸೂರು :  ನೆಕ್ಸಸ್ ಸೆಂಟರ್ ಸಿಟಿ ಮಾಲ್‌ನಲ್ಲಿ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಗೆಡ್ಡೆ-ಗೆಣಸು ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು.

ನೆಕ್ಸಸ್ ಸೆಂಟರ್ ಸಿಟಿ ಮಾಲ್‌ನ ಮುಖ್ಯದ್ವಾರದಲ್ಲಿ ಅಲಂಕಾರಿಕವಾಗಿ ಜೋಡಿಸಿದ್ದ ವಿವಿಧ ಬಗೆಯ ಗೆಡ್ಡೆ-ಗೆಣಸುಗಳನ್ನು ಪ್ರದರ್ಶಿಸುವ ಮೂಲಕ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಮಂಜು ಶರ್ಮಾ ಮೇಳಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗೆಡ್ಡೆ-ಗೆಣಸು ಪೌಷ್ಠಿಕ ಆಹಾರ ಪದಾರ್ಥವಾಗಿದ್ದು, ನಗರವಾಸಿಗಳು ಗೆಡ್ಡೆ-ಗೆಣಸುಗಳ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಖರೀದಿ ಮಾಡಲು ಉತ್ತಮ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಕೃಷ್ಣ ಪ್ರಸಾದ್ ಮಾತನಾಡಿ, ನೈಸರ್ಗಿಕವಾಗಿ ಬೆಳೆಯುವ ಗೆಡ್ಡೆ ಗೆಣಸು ಪೋಷಕಾಂಶದ ಕಣಜವಾಗಿದ್ದು, ಯಾವುದೇ ಆತಂಕವಿಲ್ಲದೆ ಸವಿಯಬಹುದು.

ನಮ್ಮ ದಿನನಿತ್ಯದ ಊಟದಲ್ಲಿ ಗೆಡ್ಡೆ ಗೆಣಸನ್ನು ಬಳಸಲು ಮತ್ತು ಯುವ ಜನತೆಗೆ ಇಷ್ಟವಾಗುವ ಅಡುಗೆಗಳನ್ನು ಪರಿಚಯಿಸುವ ದೃಷ್ಟಿಯಿಂದ ಮೇಳ ಏರ್ಪಡಿಸಲಾಗಿದೆ.

ಪರ್ಪಲ್ ಯಾಮ್, ಸಿಹಿ ಗೆಣಸು, ಕೆಸು, ಸುವರ್ಣ ಗೆಡ್ಡೆ, ಬಳ್ಳಿ ಆಲೂಗೆಡ್ಡೆ, ಕೂವೆ ಗೆಡ್ಡೆ, ಬಣ್ಣದ ಸಿಹಿ ಗೆಣಸು, ಹಸಿರು ಮತ್ತು ಕಪ್ಪು ಹರಿಷಿಣ, ಮಾವಿನ ಶುಂಠಿ ಮೊದಲಾದ ಗೆಡ್ಡೆ ಗೆಣಸುಗಳು ಲಭ್ಯವಿವೆ ಎಂದರು.

ಮೇಳದಲ್ಲಿ ೧೦ಕ್ಕೂ ಹೆಚ್ಚಿನ ಮಳಿಗೆಗಳು ಗೆಡ್ಡೆ-ಗೆಣಸಿನ ಮೌಲ್ಯವರ್ಧಿತ ಪದಾರ್ಥ, ದೇಸಿ ಅಕ್ಕಿ, ಸಿರಿಧಾನ್ಯಗಳು, ಜವಾರಿ ಬೀಜಗಳು, ಗಾಣದ ಎಣ್ಣೆ , ಮತ್ತು ಸಾವಯವ ಪದಾರ್ಥಗಳನ್ನು ಇಡಲಾಗಿದೆ. ಹಾಗೆಯೇ ಆಹಾರ ಪ್ರಿಯರಿಗೆ ಜೋಳದ ರೊಟ್ಟಿ ಮತ್ತು ಗೆಣಸಿನ ಪಲ್ಯ, ರಾಗಿರೊಟ್ಟಿ-ಹುಚ್ಚೆಳ್ಳು ಚಟ್ನಿ, ದೇಸಿ ಕ್ಯಾರೆಟ್ ಹಲ್ವ, ಬೆಲ್ಲದ ಐಸ್ಕ್ರೀಂ ಸೇರಿದಂತೆ ಬಗೆಬಗೆಯ ಪಾನೀಯಗಳು ದೊರೆಯಲಿವೆ ಎಂದು ಮಾಹಿತಿ ನೀಡಿದರು.

ಅಡುಗೆ ಪ್ರದರ್ಶನ: ಬರಹಗಾರ್ತಿ ಮತ್ತು ಆಹಾರ ತಜ್ಞೆ ಶ್ರೀಮತಿ ರತ್ನಾ ರಾಜಯ್ಯ, ನಾಳೆ(ಮಾ.೨) ಗೆಡ್ಡೆ-ಗೆಣಸುಗಳಿಂದ ತಯಾರಿಸಬಹುದಾದ ಅಡುಗೆಗಳ ಪ್ರದರ್ಶನ ಮತ್ತು ಪರಿಚಯ ಮಾಡಿಕೊಡಲಿದ್ದಾರೆ.

ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ಹಿರಿಯ ಶಿಕ್ಷಕಿಯರಾದ ಅಮೀರಾ ಸುಬೋಹಿ, ನಂದಿತಾ ಫಿಲಿಪ್, ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಸೀಮಾ, ನೆಕ್ಸಸ್ ಸೆಂಟರ್ ಸಿಟಿ ಮಾಲ್‌ನ ಮೋಹನ್‌ಕುಮಾರ್, ಮನು, ಜುನೈದ್, ಮಧು, ಮಿಥುನ್, ಅಮೃತ್ ಮತ್ತಿತರರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ