ಭೇರ್ಯ : ಖಾಸಗಿ ಶಾಲೆಯ ಮಿನಿ ಬಸ್‌ಗೆ ರಸ್ತೆ ಕಾಮಗಾರಿ ಮಾಡುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಸ್ ಉರುಳಿ ಬಿದ್ದ ಘಟನೆ ಸಾಲಿಗ್ರಾಮ – ಭೇರ್ಯ ಹೆದ್ದಾರಿಯಲ್ಲಿನ ಕುರುಬಹಳ್ಳಿ ಗೇಟ್ ಬಳಿ ನಡೆದಿದೆ. ಈ ಬಸ್ ಸಾಲಿಗ್ರಾಮ ತಾಲ್ಲೂಕಿನ ಮಿರ್ಲೆ ಗ್ರಾಮದ ಸಿಇಟಿ ಖಾಸಗಿ ಶಾಲೆಗೆ ಸೇರಿದ್ದು ಎನ್ನಲಾಗಿದೆ.
ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ತೆರಳುತ್ತಿದ್ದ ಟ್ಯಾಂಕರ್ ಕುರುಬಹಳ್ಳಿ ಗ್ರಾಮದಿಂದ ಇದೇ ಮಾರ್ಗವಾಗಿ ಶಾಲಾ ಮಕ್ಕಳನ್ನು ತುಂಬಿಕೊಂಡು ಮಿರ್ಲೆ ಗ್ರಾಮಕ್ಕೆ ಹೋಗುತ್ತಿದ್ದ ಮಿನಿ ಬಸ್‌ಗೆ ಬಳಿ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಮಿನಿ ಬಸ್‌ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಮಕ್ಕಳನ್ನು ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಿಯರು ಹಾಗೂ ಸಾಲಿಗ್ರಾಮ ಪೊಲೀಸ್ ಠಾಣೆಯ ಪೊಲೀಸರು ಕರೆದೊಯ್ದಿದ್ದು, ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ದಾಖಲಾಗಿದೆ.