ನಾಳೆ ( ಫೆಬ್ರವರಿ 8 ) ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದು ನೈಋತ್ಯ ಪಾಕಿಸ್ತಾನದಲ್ಲಿ ಚುನಾವಣಾ ಅಭ್ಯರ್ಥಿಗಳ ಕಚೇರಿ ಹೊರಗೆ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್ ಸ್ಫೋಟ ಸಂಭವಿಸಿದೆ.
ಈ ಬಾಂಬ್ ಸ್ಫೋಟದಲ್ಲಿ ಕನಿಷ್ಟ 22 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 37 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊದಲ ಸ್ಫೋಟ ಕ್ವೆಟ್ಟಾ ನಗರದಿಂದ ಸುಮಾರು 50 ಕಿಲೋಮೀಟರ್ ದೂರದ ಪಿಶಿನ್ ಜಿಲ್ಲೆಯ ಸ್ವತಂತ್ರ ಅಭ್ಯರ್ಥಿ ಕಚೇರಿಯ ಬಳಿ ಸಂಭವಿಸಿದೆ.
ಎರಡನೇ ಸ್ಫೋಟ ಕಿಲ್ಲಾ ಸೈಫುಲ್ಲಾ ನಗರದಲ್ಲಿ ಇಸ್ಲಾಮಿಸ್ಟ್ ಜಮಿಯತ್ ಉಲೇಮಾ ಎ ಇಸ್ಲಾಂ ಎಫ್ ಪಕ್ಷದ ಚುನಾವಣಾ ಕಚೇರಿ ಬಳಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





