Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಸುತ್ತೂರು ಜಾತ್ರಾ ಮಹೊತ್ಸವ: ಕೃಷಿ ಮೇಳಕ್ಕೆ ಚಾಲನೆ ನೀಡಿದ ದಿನೇಶ್ ಗುಂಡೂರಾವ್

ಮೈಸೂರು: ಆರು ದಿನಗಳ ಕಾಲ ನಡೆಯುವ ಸುತ್ತೂರು ಶ್ರೀಕ್ಷೇತ್ರ‌ ಜಾತ್ರಾ ಮಹೊತ್ಸವದ ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಪರಮಪೂಜ್ಯ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮೀಜಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕೃಷಿ ಮೇಳವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ನೆರವೇರಿಸಿದರು.

ನಂತರ ಸ್ವಾಮೀಜಿಗಳೊಡನೆ ಸಚಿವರು ಹಾಗೂ ಇರ ಗಣ್ಯರು ಕೃಷಿ ಮೇಳದಲ್ಲಿ ತೆರಯಲಾಗಿರುವ ಹಲವು ಮಳಿಗೆಗಳು ಹಾಗೂ ವಿವಿಧ ಬೆಳೆಗಳ ವೀಕ್ಷಣೆ ನಡೆಸಿದರು. ಅಲ್ಲದೇ ರೈತರ ಸಾಕು ಪ್ರಾಣಿಗಳಾದ ದೇಶೀ ತಳಿಯ ಹಸು, ಕುರಿಗಳ ಪ್ರದರ್ಶನ ಮತ್ತು ಕೃಷಿ ಪರಿಕರಗಳ ವೀಕ್ಷಣೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದಲ್ಲದೇ ಆಹಾರ ಧಾನ್ಯಗಳ ಮಳಿಗೆಗಳಿಗೆ ಭೇಟಿ ನೀಡಿ ಪ್ರದರ್ಶನಕ್ಕಿಡಲಾಗಿರುವ ವಿವಿಧ ರೀತಿಯ ಆಹಾರ ಪದಾರ್ಥಗಳ ಬಳಸಲು ಪ್ರೇರಣೆ ನೀಡಿರುವ ಮಾದರಿಗಳನ್ನು ಶ್ಲಾಘಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!