ಆಂಧ್ರ ಪ್ರದೇಶ: ಇಲ್ಲಿನ ವಿಶಾಖಪಟ್ಟಣಂನ ವೈ ಎಸ್ ರಾಯರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆ 399 ರನ್ ಗುರಿ ನೀಡಿದೆ.
ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 78.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿ ಆಂಗ್ಲ ಪಡೆಗೆ 399 ರನ್ ಟಾರ್ಗೆಟ್ ನೀಡಿದೆ.
ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿ ಟೀಂ ಇಂಡಿಯಾಗೆ ಇಂಗ್ಲೆಂಡ್ ವೇಗಿ ಆಂಡರ್‌ಸನ್ ಆರಂಭಿಕ ಆಘಾತ ನೀಡಿದರು. ತನ್ನ ಒಂದೇ ಓವರ್‌ನಲ್ಲಿ ಜೈಸ್ವಾಲ್ (17) ಮತ್ತು ನಾಯಕ ರೋಹಿತ್ ಶರ್ಮಾ (13) ವಿಕೆಟ್ ಪಡೆದರು. ಇದರ ನಡುವೆ ತಾಳ್ಮೆಯ ಆಟವಾಡಿದ ಶುಭ್‌ಮನ್ ಗಿಲ್ (104) ಶತಕ ದಾಖಲಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅಯ್ಯರ್ (29), ಅಶ್ವಿನ್ (29) ಮತ್ತು ಅಕ್ಷರ್ ಪಟೇಲ್ (45) ರನ್ ಬಾರಿಸಿ ಗಮನ ಸೆಳೆದರು.
ಇತ್ತ ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಟಾಮ್ ಹಾರ್ಟ್ಲಿ 77/4, ರೆಹೆನ್ ಅಹ್ಮದ್ 88/3 ಮತ್ತು ಆಂಡರ್‌ಸನ್ 29/2 ವಿಕೆಟ್ ಪಡೆದರು.