ಶಿವಮೊಗ್ಗ: ಪ್ರತ್ಯೇಕ ದಕ್ಷಿಣ ಭಾರತ ದೇಶದ ಬಗ್ಗೆ ಸಂಸದ ಡಿಕೆ ಸುರೇಶ್ ಮಾತಾಡಿರುವುದನ್ನು ಸಿದ್ದರಾಮಯ್ಯ ಒಪ್ಪಿಲ್ಲ, ಅವರ ನಿಲುವನ್ನು ತಾನು ಸ್ವಾಗತಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತಾಡಿದ ಮಾಜಿ ಸಚಿವ, ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಜಿನ್ನಾ ಸಂಸ್ಕೃತಿಯ ಪ್ರತಿಪಾದಕರಾಗಿದ್ದಾರೆ, ಭಾರತ ಎರಡು ಹೋಳಾಗಿ ಹಿಂದೂಸ್ತಾನ-ಪಾಕಿಸ್ತಾನ ಅಗಿದ್ದು ಅವರಿಗೆ ಸಮಾಧಾನವಾಗಿಲ್ಲ, ಭಾರತೀಯರೆಲ್ಲ ಇನ್ನೂ ಆ ನೋವಿನಿಂದ ಹೊರಬಂದಿಲ್ಲ, ಅದರೆ ಇವರು ದೇಶವನ್ನು ಮತ್ತಷ್ಟು ಒಡೆಯುವ ಹುನ್ನಾರ ಮಾಡಿದಂತಿದೆ ಎಂದು ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯ ಅವರು ಸುರೇಶ್ ಹೇಳಿರುವುದನ್ನು ಒಪ್ಪಿಲ್ಲ ಓಕೆ; ಅದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸೋನಿಯ ಗಾಂಧಿ ಏನು ಹೇಳುತ್ತಾರೆ ಅನೋದು ಬಹಳ ಮುಖ್ಯ, ಅವರ ಅಭಿಪ್ರಾಯಗಳನ್ನು ದೇಶದ ಮುಂದೆ ಇಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.