Mysore
27
broken clouds

Social Media

ಗುರುವಾರ, 08 ಜನವರಿ 2026
Light
Dark

ಮೈಸೂರು: ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾದ ದಂಪತಿ

ಸ್ನೇಹಿತನಿಗೆ ಸಾಲ ಕೊಡಿಸಿ ಆತ ವಾಪಸ್ ಕೊಡದೇ ಸಾಲಗಾರರ ಕಿರುಕುಳ ಹೆಚ್ಚಾದ ಕಾರಣ ಮೈಸೂರಿನ ಯರಗನಹಳ್ಳಿ ನಿವಾಸಿಗಳಾದ ದಂಪತಿ ವಿಶ್ವ ( 34 ) ಹಾಗೂ ಸುಷ್ಮ ( 28 ) ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ವಿಶ್ವ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದು ಶಿವು ಎಂಬ ಸ್ನೇಹಿತನಿಗೆ ಸಾಲಗಾರರಿಂದ 5 ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ಆದರೆ ಶಿವು ಸಾಲದ ಹಣವನ್ನು ವಾಪಸ್ ಕೊಡದೇ ಹಣ ಹಿಂತಿರುಗಿಸಲು ಕೇಳಿದಾಗ ಕೆಟ್ಟ ಮಾತಿಗಳಿಂದ ನಿಂದಿಸಿ, ರೌಡಿ ಕರೆದುಕೊಂಡು ಬರುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಸ್ವತಃ ವಿಶ್ವ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿರುವ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಅತ್ತ ಸಾಲ ಕೊಟ್ಟ ಸಾಲಗಾರರು ತನ್ನ ಮನೆ ಮುಂದೆ ಬಂದು ಹಣ ವಾಪಸ್ ಕೊಡುವಂತೆ ಕೇಳುತ್ತಿದ್ದಾರೆ, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಶ್ವ ವಿಡಿಯೊದಲ್ಲಿ ತಿಳಿಸಿದ್ದಾರೆ‌.

ಅಲ್ಲದೇ ಚೋರನಹಳ್ಳಿಯ ರಾಜಣ್ಣ ಎಂಬಾತನಿಗೂ ಸಹ ತಾನು ಚಿನ್ನಾಭರಣವನ್ನು ನೀಡಿದ್ದೆ‌. ಅದನ್ನು ವಾಪಸ್ ಕೇಳಿದಾಗ ಹಿಂತಿರುಗಿಸದೇ ಸಹಾಯ ಮಾಡುತ್ತಿದ್ದಾನೆ ಎಂದು ಮತ್ತೊಂದು ಆರೋಪವನ್ನು ವಿಡಿಯೊದಲ್ಲಿ ಮಾಡಿರುವ ವಿಶ್ವ ಕೊನೆಯಲ್ಲಿ ಆ ಚಿನ್ನವನ್ನು ತನ್ನ ಮನೆಯವರಿಗೆ ಸಿಗುವ ಹಾಗೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

 

ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ. ಆತ್ಮಹತ್ಯೆ ಚಿಂತನೆ ತಲೆಗೆ ಬಂದಾಗ ಆಪ್ತರೊಡನೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಅಥವಾ ಈ ಸಹಾಯವಾಣಿಗೆ ಕರೆ ಮಾಡಬೇಕು. 

Suicide prevention Helpline Number: 9152987821

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!