ಬೆಂಗಳೂರು: ಪದೇ ಪದೇ ಸಂಸದ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆ ನೀಡುತ್ತಲೇ, ವಾಗ್ಧಾಳಿ ನಡೆಸುತ್ತಿದ್ದಂತ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗೆ ಕೋರ್ಟ್ ಚಾಟಿ ಬೀಸಿದೆ. ಪ್ರತಾಪ್ ಸಿಂಹ ವಿರುದ್ಧ ಹೇಳಿಕೆ ನೀಡದಂತೆ ಕೋರ್ಟ್ ನೋಟಿಸ್ ನೀಡಿ ಸೂಚಿಸಿದೆ.
ಪ್ರತಾಪ್ ಸಿಂಹ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಂತ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು.
ಈ ದೂರನ್ನು ಪರಿಶೀಲಿಸಿದಂತ ಬೆಂಗಳೂರಿನ ಸಿಟಿ ಸಿವಿಲ್, ಸೆಷನ್ಸ್ ಕೋರ್ಟ್ ಈಗ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ.
ಪ್ರತಾಪ್ ಸಿಂಹ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗೆ ಸೂಚಿಸಿದೆ. ಅಲ್ಲದೇ ಫೆಬ್ರವರಿ.13ರಂದು ನ್ಯಾಯಾಲಯಲ್ಕೆ ಹಾಜರಾಗುವಂತೆ ನೋಟೀಸ್ ನಲ್ಲಿ ತಿಳಿಸಿದೆ.
ಇನ್ನೂ ಪ್ರತಾಪ್ ಸಿಂಹ ವಿರುದ್ಧ ಯಾವುದೇ ಹೇಳಿಕೆ ನೀಡದಂತೆಯೂ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಗೆ ತಿಳಿಸಲಾಗಿದೆ. ಈ ಮೂಲಕ ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯುತ್ತಿದ್ದಂತ ಎಂ.ಲಕ್ಷ್ಮಣ್ ಗೆ ಕೋರ್ಟ್ ಬಿಸಿ ಮುಟ್ಟಿಸಿದೆ.