ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವವರು ತಮ್ಮ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಹೊಂದಿರುವುದು ಕಡ್ಡಾಯ ಎಂಬುದು ತಿಳಿದಿರುವ ವಿಷಯವೇ. ಅಂತಹ ಚಾಲಕರು ತಮ್ಮ ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಂದು ( ಜನವರಿ 31 ) ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್ ಮಾಡಲು ಕೊನೆ ದಿನ ಎಂದು ಗಡುವು ನೀಡಿದ್ದು, ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ಅಂತಹ ಫಾಸ್ಟ್‌ಟ್ಯಾಗ್‌ಗಳನ್ನು ಡಿಆಕ್ಟಿವೇಟ್ ಮಾಡಲಾಗುವುದು, ಅಲ್ಲದೇ ಫಾಸ್ಟ್‌ಟ್ಯಾಗ್‌ನಲ್ಲಿ ಸಾಕಷ್ಟು ಹಣವಿದ್ದರೂ ಸಹ ಬ್ಲಾಕ್‌ಲಿಸ್ಟ್‌ಗೆ ಹಾಕಲಾಗುವುದು ಎಂದು ಹೇಳಿದೆ.
ಇಂತಹ ನಿರ್ಧಾರದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಒಂದೇ ವಾಹನಕ್ಕೆ ಹಲವು ಫಾಸ್ಟ್‌ಟ್ಯಾಗ್ ಹೊಂದಿರುವುದು, ಕೆವೈಸಿ ಪರಿಶೀಲನೆ ಮಾಡದೆಯೇ ಫಾಸ್ಟ್‌ಟ್ಯಾಗ್ ವಿತರಿಸಿರುವುದು ಹಾಗೂ ಉದ್ದೇಶಪೂರ್ವಕವಾಗಿ ವಾಹನದ ವಿಂಡ್‌ಸ್ಕ್ರೀನ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಅಂಟಿಸದೇ ಇರದಂತಹ ತಪ್ಪುಗಳನ್ನು ತಡೆಯಲು ಮುಂದಾಗಿದೆ.
ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್ ಮಾಡಲು ಹೀಗೆ ಮಾಡಿ:
1. ಬ್ಯಾಂಕ್ ಲಿಂಕ್ ಇರುವ ಫಾಸ್ಟ್‌ಟ್ಯಾಗ್ ವೆಬ್‌ಸೈಟ್‌ಗೆ ಭೇಟಿ ನೀಡಿ
2. ನಿಮ್ಮ ರಿಜಿಸ್ಟರ್ಡ್ ನಂಬರ್‌ನಿಂದ ಲಾಗ್‌ಇನ್ ಆಗಿ ಹಾಗೂ ಒಟಿಪಿ ನಮೂದಿಸಿ
3. ಬಳಿಕ ಮೈ ಪ್ರೊಫೈಲ್ ವಿಭಾಗಕ್ಕೆ ತೆರಳಿ, ಕೆವೈಸಿ ಮೇಲೆ ಕ್ಲಿಕ್ ಮಾಡಿ
4. ಅಡ್ರೆಸ್ ಪ್ರೂಫ್ ಸೇರಿದಂತೆ ಅಗತ್ಯ ವಿವರಗಳನ್ನು ನಮೂದಿಸಿ ಹಾಗೂ ಸಬ್ಮಿಟ್ ಕೊಡಿ
ಇದಾದ ಬಳಿಕ ನಿಮ್ಮ ಕೆವೈಸಿ ಅಪ್‌ಡೇಟ್ ಪೂರ್ಣಗೊಂಡಿರುತ್ತದೆ. ಕೆವೈಸಿ ವಿಭಾಗದಲ್ಲಿ ನಿಮ್ಮ ಅಪ್‌ಡೇಟೆಡ್ ಸ್ಟೇಟಸ್ ಅನ್ನು ಗಮನಿಸಬಹುದಾಗಿದೆ
ಫಾಸ್ಟ್‌ಟ್ಯಾಗ್ ಸ್ಟೇಟಸ್ ಚೆಕ್ ಮಾಡೋದು ಹೇಗೆ?
fasttag.ihmcl.com ವೆಬ್‌ಸೈಟ್‌ಗೆ ಭೇಟಿ ನೀಡಿ, ಬಳಿಕ ವೆಬ್‌ಸೈಟ್‌ನ ಬಲಭಾಗದಲ್ಲಿರುವ ಲಾಗ್‌ಇನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಡ್ಯಾಷ್‌ಬೋರ್ಡ್‌ನಲ್ಲಿರುವ ಮೈ ಪ್ರೊಫೈಲ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ, ಬಳಿಕ ಕೆವೈಸಿ ಸ್ಟೇಟಸ್ ಹಾಗೂ ಪ್ರೊಫೈಲ್ ವಿವರಗಳನ್ನು ಕಾಣಬಹುದು.
ಫಾಸ್ಟ್‌ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್ ಮಾಡಲು ಅಗತ್ಯವಾದ ದಾಖಲೆಗಳು:
ವಾಹನ ನೋಂದಣಿಪತ್ರ, ಗುರುತಿನ ದಾಖಲೆ, ವಿಳಾಸ ದಾಖಲೆ, ಪಾಸ್‌ಪೋರ್ಟ್ ಸೈಜ್ ಫೋಟೊ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್, ವೋಟರ್ ಐಡಿ ಅಥವಾ ಪಾನ್ ಕಾರ್ಡ್‌ನಂತಹ ಐಡಿ ಪ್ರೂಫ್ ನೀಡಬೇಕಾಗುತ್ತದೆ.