Mysore
20
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಕೊಡಗಿನಲ್ಲಿ ವಿಭಿನ್ನ ವಾತಾವರಣ ಸೃಷ್ಟಿಸಿದ ಎಲ್‌ನಿನೋ!

ಮಡಿಕೇರಿ: ಜಿಲ್ಲೆಯಲ್ಲಿ ಈಗ ನೈಜ ಚಳಿಗಾಲ ಶುರುವಾದಂತೆ ವಾತಾವರಣ ಕಂಡು ಬರುತ್ತಿದೆ. ಬೆಳಗ್ಗಿನ ವೇಳೆಯಲ್ಲಿ ಸಹಿಸಲು ಸಾಧ್ಯವಾಗಷ್ಟು ಚಳಿ ಮೈ ನಡುಗಿಸುತ್ತಿದೆ. ಹೊತ್ತೇರುತ್ತಿದ್ದಂತೆಯೇ ಬಿಸಿಲಿನ ತಾಪ ಅಧಿಕವಾಗುತ್ತಿದ್ದು, ದೇಹವೆಲ್ಲಾ ಉರಿಯುವಂತೆ ಶಾಖದ ಅನುಭವ ಆಗುತ್ತಿದೆ.

ಎಲ್‌ನಿನೋ ಪರಿಣಾಮದಿಂದ ಇಂತಹ ಪರಿಸ್ಥಿತಿ ಉಂಟಾಗಿದ್ದು, ಇನ್ನೂ ೫-೭ ದಿನ ಇದೇ ರೀತಿಯ ಸನ್ನಿವೇಶ ಇರಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಚಳಿಗಾಲದ ಅನುಭವ ಕೊಡುವ ಗಡ ಗಡ ನಡುಗಿಸುವ ಚಳಿ ಈಗ ಕಂಡು ಬರುತ್ತಿದೆ. ಕಳೆದ ಕೆಲ ದಿನಗಳಿಂದ ಶುಭ್ರ ಆಕಾಶವಿದ್ದು, ಬೆಳಗ್ಗಿನ ವಿಪರೀತ ಚಳಿ ಸಹಿಸಲಸಾಧ್ಯವಾದಷ್ಟು ಹೆಚ್ಚು ಇರುವ ಅನುಭವ ಆಗುತ್ತಿದೆ. ಸಾಮಾನ್ಯವಾಗಿ ನವೆಂಬರ್ ಮಧ್ಯ ಅಥವಾ ಕೊನೆಯಲ್ಲಿ ಆರಂಭವಾಗಬೇಕಿದ್ದ ಚಳಿಗಾಲ ಈ ಬಾರಿ ಜನವರಿ ಅಂತ್ಯಕ್ಕೆ ಕಾಣಿಸಿಕೊಂಡಂತಿದೆ.

ಎಲ್‌ನಿನೋ ಎಂದರೇನು?

ಫೆಸಿಫಿಕ್‌ ಸಾಗರದಲ್ಲಿ ಉಂಟಾಗುವ ಬಿಸಿ ನೀರಿನ ಪ್ರವಾಹಕ್ಕೆ ಎಲ್‌ನಿನೋ ಎನ್ನುತ್ತಾರೆ. ಇನ್ನು ಭಾರತದಲ್ಲಿ ಮಾನ್ಸೂನ್‌ ಮಳೆ ಪ್ರಮಾಣದಲ್ಲಿ ಕುಸಿತ ಉಂಟಾಗುವುದು ಹಾಗೂ ಬಿಸಿ ಗಾಳಿ ಬೀಸುವುದಕ್ಕೆ ಎಲ್‌ನಿನೋ ಎಂದು ಕರೆಯಲಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!