ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಗರ್ಲ್ ಫ್ರೆಂಡ್ ಇದ್ದಾರೆ ಎಂದು ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಚರ್ಚೆ ಮಾಡಲಾಯಿತು.
ದೊಡ್ಮನೆಯಲ್ಲಿ ಮೊದ ಮೊದಲ ಕಾರ್ತಿಕ್ ಮತ್ತು ಸಂಗೀತಾ ಸ್ನೇಹದ ಬಗ್ಗೆ ಮಾತನಾಡಲಾಯಿತು. ಆಮೇಲೆ ನಮ್ರತಾ ಅವರ ಹೆಸರಿನ ಜೊತೆ ತಳುಕು ಹಾಕಲಾಯಿತು. ನಮ್ರತಾ ಸೇರಿದಂತೆ ಹಲವರು ಕಾರ್ತಿಕ್ ಅವರಿಗೆ ಗರ್ಲ್ ಫ್ರೆಂಡ್ ಇದ್ದಾಳೆ ಎಂದು ಹೇಳಿದ್ದು, ಇದಕ್ಕೆಲ್ಲಾ ಈಗ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ಅದೇನು ಗೊತ್ತಾ ಇಲ್ಲಿದೆ ನೋಡಿ?
ನನಗೆ ಗರ್ಲ್ ಫ್ರೆಂಡ್ ಇಲ್ಲ. ಅನೇಕ ಫ್ರೆಂಡ್ಸ್ ಇದ್ದಾರೆ. ನನ್ನ ಜೊತೆ ಬಿಗ್ ಬಾಸ್ ಮನೆಯಲ್ಲಿ ಯಾರೂ ಕನೆಕ್ಟ್ ಆಗಬಾರದು. ಹತ್ತಿರಕ್ಕೆ ಬರಬಾರದು ಎನ್ನುವ ಕಾರಣಕ್ಕಾಗಿ ಆ ರೀತಿ ಸುದ್ದಿಯನ್ನು ಹರಿಬಿಡಲಾಯಿತು ಎಂದು ಹೇಳಿದ್ದಾರೆ. ನನಗೆ ತುಂಬಾ ಕನಸುಗಳಿವೆ. ಅವುಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಸದ್ಯಕ್ಕೆ ಗರ್ಲ್ ಫ್ರೆಂಡ್ ಕುರಿತಂತೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಬಿಗ್‌ಬಾಸ್ ಕನ್ನಡ ಸೀಸನ್ 10 ರಲ್ಲಿ ಒಟ್ಟು 19ಜನ ಸ್ಪರ್ಧಿಗಳು ಭಾಗವಹಿಸಿದ್ದರು. ದೊಡ್ಮನೆಗೆ ಕೊನೆಯ ಗಳಿಗೆಯಲ್ಲಿ ತನ್ನ ನಿರ್ಧಾರ ಬದಲಿಸಿಕೊಂಡು ಕಾಲಿಟ್ಟ ಕಾರ್ತಿಕ್, ಎಲ್ಲಾ ರೀತಿಯ ನೋಲು ನಲಿವುಗಳನ್ನು ಕಂಡವರು.
ಫೈನಲಿಸ್ಟ್ ಲೀಸ್ಟ್‌ನಲ್ಲಿ ಕೊನೆಯದಾಗಿ ಆಯ್ಕೆಗೊಂಡ ಇವರು, ಅಪಾರ ಅಭಿಮಾನಿಗಳ ಪ್ರೀತಿ ವಿಶ್ವಾಸದ ಫಲದಿಂದಾಗಿ ಬಿಗ್ ಬಾಸ್ ಟ್ರೋಫಿಯನ್ನು ಗೆದ್ದರು. ಇನ್ನು ಮೊಲದ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್, ಎರಡನೇ ರನ್ನರ್‌ಅಪ್ ಸಂಗೀತ ಶೃಂಗೇರಿ, ಮೂರನೇ ರನ್ನರ್ ವಿನಯ್ ಗೌಡ ಮತ್ತು ನಾಲ್ಕನೇ ರನ್ನರ್ ಆಗಿ ವರ್ತೂರ್ ಸಂತೋಷ್ ಸ್ಥಾನ ಪಡೆದುಕೊಂಡರು.