Mysore
22
broken clouds

Social Media

ಸೋಮವಾರ, 12 ಜನವರಿ 2026
Light
Dark

ಬೃಂದಾವನ ಗಾರ್ಡನ್‌ನಲ್ಲಿ ಬೆಂಕಿ ನಂದಿಸುವುದು ಹೀಗೆ: ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿದ ಪ್ರವಾಸಿಗ

ಮಂಡ್ಯ: ಶ್ರೀರಂಗಪಟ್ಟಣದ ಕೆಆರ್‌ಎಸ್‌ (ಕೃಷ್ಣಸಾಗರ ಅಣೆಕಟ್ಟೆ)ಯ ಬೃಂದಾವನ ಗಾರ್ಡನ್‌ನಲ್ಲಿ ನಿನ್ನೆ (ಜ.27) ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಂದಿಸುತ್ತಿರುವ ಬಗ್ಗೆ ವೀಡಿಯೋ ಮಾಡಿರುವ ಪ್ರವಾಸಿಗರೊಬ್ಬರು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಬೃಂದಾವನ ಗಾರ್ಡನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ನಂದಿಸಲು ಅಲ್ಲಿನ ಸಿಬ್ಬಂದಿಗಳು ಬೆಂಕಿಯನ್ನು ನಂದಿರುವ ಕನಿಷ್ಠ ಸೌಕರ್ಯವು ಇಲ್ಲದೇ ಬಕೆಟ್‌ ಮೂಲಕ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದು ಇದನ್ನು ವೀಡಿಯೋ ಮಾಡಿರುವ ಪ್ರವಾಸಿಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆಯನ್ನು ಟ್ಯಾಗ್‌ ಮಾಡಿದ್ದಾರೆ.

ಸಂಜೆ 5.30ಕ್ಕೆ ಬೆಂಕಿ ಕಾಣಿಸಿಕೊಂಡಿದೆ, 6.15, 6.45, 7ಕ್ಕೆ ವಿಡಿಯೋ ಶೂಟ್ ಮಾಡಿದ್ದೇನೆ. ಆದರೂ ಈ ಬಗ್ಗೆ ಯಾರು ಗಮನ ಹರಿಸಿಲ್ಲ. ಸಿಬ್ಬಂದಿಗಳಿಗೆ ಯಾವುದೇ ಉಪಕರಣಗಳಿಲ್ಲ, ನೀರಿನ ಬಕೆಟ್‌ನಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬರೆದುಕೊಂಡು ವಿಡಿಯೋಗಳನ್ನು ಶೇರ್‌ ಮಾಡಿದ್ದಾರೆ.

ಹ್ಯಾಶ್‌ ಟ್ಯಾಗ್‌ ಬಳಸಿ #ಬೃಂದಾವನ ಗಾರ್ಡನ್ಸ್ #ಮಂಡ್ಯದಲ್ಲಿ ಬೆಂಕಿ ನಂದಿಸುವುದು ಹೀಗೆ.. ಎಂದು ಬರೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!