Mysore
22
clear sky

Social Media

ಶುಕ್ರವಾರ, 27 ಮಾರ್ಚ್ 2026
Light
Dark

ಜೂ. ‘ಎನ್‌ಟಿಆರ್‌’ ಅಭಿನಯದ ದೇವರ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ : ಚಿತ್ರ ಬಿಡುಗಡೆ ಯಾವಾಗ!

ತೆಲಂಗಾಣ : ಜೂನಿಯರ್ ಎನ್‌.ಟಿ.ಆರ್‌ ವಿವಿಧ ಪಾತ್ರಗಳಲ್ಲಿ ಅಭಿನಯ ಮಾಡುವ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಮಿಂಚಿದ್ದಾರೆ. ಅವರ ಮುಂದಿನ ಸಿನಿಮಾದ ಬಗ್ಗೆ ಕುತೂಹಲವೂ ಅಷ್ಟೇ ಹೆಚ್ಚಾಗಿದೆ. ಇವರು ಕೊರಟಾಲ ಶಿವ ಅವರೊಂದಿಗೆ ʼದೇವರʼ ಸಿನಿಮಾದಲ್ಲಿ ಅಭಿನಯ ಮಾಡುತ್ತಿದಾರೆ.

ಸಿನಿಮಾ ಅನೌನ್ಸ್‌ ಆದ ದಿನದಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಸಿನಿಮಾದಲ್ಲಿ ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌, ನಟ ಸೈಫ್‌ ಅಲಿಖಾನ್‌ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಬಿಟೌನ್‌ ಸಿನಿಮಂದಿಗೂ ʼದೇವರʼ ಸಿನಿಮಾ ಕುತೂಹಲ ಹುಟ್ಟಿಸಿದೆ. ಎರಡು ಭಾಗದಲ್ಲಿ ʼದೇವರʼ ತೆರೆ ಕಾಣಲಿದೆ.

ಮೊದಲ ಭಾಗ ಇದೇ ಏಪ್ರಿಲ್‌ 5 ರಂದು ರಿಲೀಸ್‌ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿತ್ತು. ಆದರೆ ಇದೀಗ ಸಿನಿಮಾ ಅಂದುಕೊಂಡ ದಿನಕ್ಕೆ ತೆರೆಗೆ ಬರುವುದಿಲ್ಲ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆಯಾಗಿದೆ.

“ದೇವರ ಸಿನಿಮಾಗೆ ವಿಎಫ್‌ ಎಕ್ಸ್‌ ಕೆಲಸ ಹೆಚ್ಚಿದೆ. ಔಟ್‌ ಪುಟ್‌ ಬರಲು ನಿರೀಕ್ಷೆಗಿಂತ ಹೆಚ್ಚಿನ ಸಮಯ ಬೇಕಾಗುತ್ತದೆ. ಈ ಕಾರಣದಿಂದ ಚಿತ್ರತಂಡ ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ.

ಅಂದುಕೊಂಡ ದಿನಕ್ಕೆ (ಏ.5 ರಂದು) ರಿಲೀಸ್‌ ಮಾಡದಿರಲು ನಿರ್ಧರಿಸಿದೆ” ಎಂದು ಮೂಲಗಳು ಹೇಳಿರುವುದಾಗಿ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.”ಇನ್ನು ಕೂಡ 20 ದಿನದ ಚಿತ್ರೀಕರಣ ಬಾಕಿಯಿದೆ.

ಇದಲ್ಲದೆ ಸೈಫ್‌ ಅಲಿಖಾನ್‌ ಅವರಿಗೆ ಭುಜದ ಶಸ್ತ್ರ ಚಿಕಿತ್ಸೆಯಾಗಿದ್ದು, ಚಿತ್ರೀಕರಣ ಇನ್ನಷ್ಟು ತಡವಾಗುವ ಸಾಧ್ಯತೆಯಿದೆ. ಈ ಕಾರಣದಿಂದ ರಿಸ್ಕ್‌ ತೆಗದುಕೊಳ್ಳದೆ ಸಿನಿಮಾ ರಿಲೀಸ್‌ ದಿನವನ್ನು ಮುಂದೂಡಲಾಗಿದೆ.

ಸಿನಿಮಾ 2024 ರ ದ್ವಿತೀಯಾರ್ಧದಲ್ಲಿ ತೆರೆ ಕಾಣಲಿದೆ” ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!