ಗೋರಖ್‌ಪುರ: ಆಯೋಧ್ಯ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಶ್ರೀ ರಾಮಚರಿತ ಮಾನಸದ ಲಕ್ಷ ಲಕ್ಷ ಪುಸ್ತಕಗಳಿಗೆ ಬೇಡಿಕೆ ಬಂದಿದೆ. ಬೇಡಿಕೆ ಪೂರೈಸಲು ಸಾಧ್ಯವಾಗದ ಕಾರಣ ಉಚಿತ ಡೌನ್ಲೋಡ್ ಗೆ ವಿಶ್ವದ ಅತಿ ದೊಡ್ಡ ಪ್ರಕಾಶಕರಲ್ಲಿ ಒಬ್ಬರಾದ ಉತ್ತರ ಪ್ರದೇಶದ ಗೋರಖ್ ಪುರದ ಗೀತಾ ಪ್ರೆಸ್ ಅನುಮತಿ ನೀಡಿದೆ.
ನಮ್ಮ ವೆಬ್ಸೈಟ್ ನಲ್ಲಿ ಶ್ರೀರಾಮಚರಿತ ಮಾನಸ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ಅನುಮತಿಸಿದ್ದೇವೆ ಎಂದು ಗೀತಾ ಪ್ರೆಸ್ ಮಾಹಿತಿ ನೀಡಿದೆ. ರಾಮಚರಿತ ಮಾನಸ ಅಪ್ಲೋಡ್ ಮಾಡಲಾಗುತ್ತಿದ್ದು, ಮಂಗಳವಾರದಿಂದ ಉಚಿತ ಡೌನ್ಲೋಡ್ ಗೆ ಲಭ್ಯವಿರುತ್ತದೆ.
15 ದಿನಗಳವರೆಗೆ ಸೇವೆ ಒದಗಿಸಲಿದ್ದು, 50,000 ಜನರಿಗೆ ಡೌನ್ಲೋಡ್ ಮಾಡಲು ಅವಕಾಶ ನೀಡುವುದು. ಉಚಿತ ಡೌನ್ ಲೋಡ್ ಸೇವೆ ವಿಸ್ತರಿಸಲಾಗುವುದು ಎಂದು ಗೀತಾ ಪ್ರೆಸ್ ತಿಳಿಸಿದೆ.
ಗೀತಾ ಪ್ರೆಸ್ ವೆಬ್‌ಸೈಟ್ 10 ಭಾಷೆಗಳಲ್ಲಿ ರಾಮಚರಿತಮಾನಗಳ ಉಚಿತ ಡೌನ್‌ಲೋಡ್ ಅನ್ನು ಅನುಮತಿಸುತ್ತದೆ. ರಾಮಚರಿತಮಾನಸ್ ಹಿಂದಿ, ಇಂಗ್ಲಿಷ್, ನೇಪಾಳಿ ಮತ್ತು ತೆಲುಗು ಸೇರಿದಂತೆ ಹತ್ತು ವಿವಿಧ ಭಾಷೆಗಳಲ್ಲಿ ಗೀತಾ ಪ್ರೆಸ್ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ.