Mysore
20
broken clouds

Social Media

ಶನಿವಾರ, 28 ಡಿಸೆಂಬರ್ 2024
Light
Dark

ಶಾಸಕರು ಚಲಿಸುತ್ತಿದ್ದ ಕಾರು ಪಲ್ಟಿ: ಬಿಜೆಪಿ ಶಾಸಕ ಆಸ್ಪತ್ರೆಗೆ ದಾಖಲು!

ಕಲಬುರಗಿ :  ಕಾರ್ ಪಲ್ಟಿಯಾದ ಪರಿಣಾಮ ಕಲಬುರಗಿ ಗ್ರಾಮೀಣದ ಬಿಜೆಪಿ ಶಾಸಕರಾದ ಬಸವರಾಜ ಮತ್ತಿಮೂಡ ಅವರು ಗಾಯಗೊಂಡಿದ್ದಾರೆ. ಈ ಘಟನೆಯು ಕಲಬುರಗಿ ಹೊರವಲಯದ ಪಾಳಾ ಗ್ರಾಮದ ಬಳಿ ನಡೆದಿದೆ.

ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕರಾದ ಬಸವರಾಜ್ ಮತ್ತಿಮೂಡ ಅವರು ತಮ್ಮ ಫಾರ್ಚುನರ್ ಕಾರಿನಲ್ಲಿ ಕೆಲಸದ ನಿಮಿತ್ತ ತೆರಳುತ್ತಿದ್ದರು.
ಈ ವೇಳೆ ಜಿಲ್ಲೆಯ ಹೊರವಲಯದ ಪಾಳಾ ಗ್ರಾಮದ ಬಳಿಯ ರಸ್ತೆಯಲ್ಲಿ ಬರುತ್ತಿದ್ದಂತೆ ಕಾರು ಪಲ್ಟಿಯಾಗಿದೆ.

ಸದ್ಯ ಗಾಯಗೊಂಡಿರುವ ಶಾಸಕರನ್ನು ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ