ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಮನೋರಂಜನ್ ಪ್ರಕರಣದ ಪ್ರಮುಖ ರೂವಾರಿಯಾಗಿದ್ದಾನೆ.
ಈ ಸಂಚಿನ ಮಾಸ್ಟರ್ ಮೈಂಡ್ ಮನೋಹರ್ ಎಂಬುದು ಪಾಲಿಗ್ರಾಫ್, ನಾರ್ಕೊ-ವಿಶ್ಲೇಷಣೆ ಮತ್ತು ಮೆದುಳಿನ ಮ್ಯಾಪಿಂಗ್ ಪರೀಕ್ಷೆಗಳಲ್ಲಿ ಬಹಿರಂಗವಾಗಿದೆ.
ಡಿಸೆಂಬರ್ 13ರಂದು ನವದೆಹಲಿಯ ಸಂಸತ್ ಭವನದ ಮೇಲೆ ನಡೆದಿದ್ದ ಸ್ಮೋಕ್ ಬಾಂಬ್ ದಾಳಿಯ ಘಟನೆಯ ಹಿಂದಿನ ಮಾಸ್ಟರ್ ಮೈಂಡ್ ಲಲಿತ್ ಝಾ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು. ಈ ಮನೋಹರ್ ಎಂಬುದು ಮ್ಯಾಪಿಂಗ್ ಪರೀಕ್ಷೆಯಿಂದ ಬಹಿರಂಗವಾಗಿದೆ.
ಎಲ್ಲಾ ಆರು ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಡಿ, ಅಮೋಲ್ ಶಿಂಧೆ, ನೀಲಂ ಆಜಾದ್, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರನ್ನು ಶನಿವಾರ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗಿನ ತನಿಖೆಗಳು ಮತ್ತು ವಿಚಾರಣೆಗಳಿಂದ ಆರೋಪಿಗಳು ಸರ್ಕಾರಕ್ಕೆ ಸಂದೇಶ ಕಳುಹಿಸಲು ಯೋಜಿಸಿದ್ದರು ಎಂದು ಪರೀಕ್ಷೆ ಮೂಲಕ ತಿಳಿದುಬಂದಿದೆ.