Mysore
14
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಸ್ವಾಮಿ ವಿವೇಕಾನಂದರ ವಿರುದ್ಧ ವಿವಾದಾತ್ಮಕ ಟ್ವಿಟ್‌ : ಚೇತನ್‌ ಅಹಿಂಸಾ ವಿರುದ್ಧ ಕಿಡಿ

ಬೆಂಗಳೂರು: ಒಂದಲ್ಲ ಒಂದು ವಿಚಾರದಲ್ಲಿ ವಿವಾದಿತ ಟ್ವೀಟ್‌ ಮಾಡುವ ಮೂಲಕ ಸುದ್ದಿಯಲ್ಲಿರುವ ನಟ ಚೇತನ್‌ ಕುಮಾರ್‌ ಅಹಿಂಸಾ ಈಗ ಸ್ವಾಮಿ ವಿವೇಕಾನಂದರ ವಿಚಾರವಾಗಿ ಟೀಕೆ ಮಾಡುವ ಮೂಲಕ ಟಾರ್ಗೆಟ್‌ ಆಗಿದ್ದಾರೆ.

ಪ್ರತಿ ವಿಚಾರಗಳಲ್ಲೂ ತಮ್ಮೊಂದೊಂದು ವಿವಾದಿತ ಅಭಿಪ್ರಾಯವನ್ನು ಸೋಶಿಯಲ್‌ ಮೀಡಿಯಾದಲ್ಲಿ ಚೇತನ್‌ ಕುಮಾರ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇಂದು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ನಡುವೆ ಚೇತನ್‌ ಕುಮಾರ್‌ ಅಹಿಂಸಾ, ಸ್ವಾಮಿ ವಿವೇಕಾನಂದ ಸಮಾನತಾವಾದಿಯಲ್ಲ, ಅವರು ನಮ್ಮವರಲ್ಲ ಎಂದು ಟ್ವೀಟ್‌ ಮಾಡುವ ಮೂಲಕ ವಿವಾದದ ಕಿಡಿ ಎಬ್ಬಿಸಿದ್ದಾರೆ.

ವಿವೇಕಾನಂದರು ಮಹಿಳಾ ವಿಮೋಚನೆಯನ್ನು ವಿರೋಧಿಸಿದ ವ್ಯಕ್ತಿ ಅದರೊಂದಿಗೆ ಜಾತಿ ವ್ಯವಸ್ಥೆಯ ಪರವಾಗಿ ಮಾತನಾಡಿದ್ದರು ಎಂದು ಚೇತನ್‌ ಬರೆದುಕೊಂಡಿದ್ದಾರೆ.

‘ಇಂದು ವಿವೇಕಾನಂದರ ಜನ್ಮದಿನ. ವಿವೇಕಾನಂದರು ಮಹಿಳಾ ವಿಮೋಚನೆಯನ್ನು ವಿರೋಧಿಸಿದವರು ಮತ್ತು ಜಾತಿ ವ್ಯವಸ್ಥೆಯನ್ನು ಸರ್ಮಥನೆ ಮಾಡಿಕೊಂಡವರು. ಅವರೇ ಬರೆದ ಹಾಗೆ, ‘ಜಾತಿ ಒಳ್ಳೆಯದು, ಅದೊಂದೇ ಜೀವನವನ್ನು ಪರಿಹರಿಸುವ ನೈಸರ್ಗಿಕ ಮಾರ್ಗವಾಗಿದೆ’ ಎನ್ನುತ್ತಾರೆ.

ವಿವೇಕಾನಂದರನ್ನು ಹಿಂದೂ ಸಮಾಜದಿಂದ ವೈಭವೀಕರಿಸಲಾಗಿದೆ. ಏಕೆಂದರೆ, ಅವರು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುವ ಪರವಾಗಿ ಇದ್ದವರು. ವಿವೇಕಾನಂದರು ಸಮಾನತಾವಾದಿಯಲ್ಲ.. ಅವರು ನಮ್ಮವರಲ್ಲ’ ಎಂದು ತಮ್ಮ ಮೊದಲ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಅದರೊಂದಿಗೆ ಹಿಂದುತ್ವದ ಪರವಾಗಿರುವ ವೀರ್‌ ಸಾವರ್ಕರ್‌ ಹಾಗೂ ಆ

ರೆಸ್ಸೆಸ್‌ಗಿಂತ ಹಿಂದೂ ಉದಾರವಾದಿಗಳಾದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಅವರು ತುಂಬಾ ಡೇಂಜರಸ್‌ ಎಂದು ಬರೆದಿದ್ದಾರೆ. ಹಿಂದು ಉದಾರವಾದಿಗಳನ್ನು ಅಪ್ರಾಮಾಣಿಕರು/ಕುತಂತ್ರವಾದಿ ಸ್ನೇಹಿತರು ಎಂದು ಚೇತನ್‌ ಬರೆದಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!