Mysore
28
overcast clouds

Social Media

ಶನಿವಾರ, 20 ಜೂನ್ 2026
Light
Dark

ಯುವಕರು ಮೌಢ್ಯತೆಯಿಂದ ಮೊದಲು ಹೊರಬರಬೇಕಿದೆ: ಎಚ್‌ಸಿಎಂ

ಬೆಂಗಳೂರು: ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆಯ ಘಟನೆಗಳು ನಡೆಯದಂತೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಈ ಕುರಿತಂತೆ ಸಂವಿಧಾನವದ ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ ಮಹದೇವಪ್ಪ ಹೇಳಿದ್ದಾರೆ.

ಈ ಸಂಬಂಧ ಗುರುವಾರ ಪ್ರಕಟಣೆ ಹೊರಡಿಸಿರುವ ಸಚಿವರು, ಚಿಕ್ಕಮಗಳೂರು ಜಿಲ್ಲೆಯ ಗೇರಮರಡಿ ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ಆಚರಣೆ ಸಂಬಂಧ ಇವು ಸಂವಿಧಾನದ ಸಮಾನತೆ ಮತ್ತು ಭ್ರಾತೃತ್ವದ ಆಯಗಳಿಗೆ ವಿರುದ್ಧವಾಗಿದೆ. ಶೂ ಕೊಂಡುಕೊಳ್ಳಲು ಆಗದಿರುವ ಬಡ ವರ್ಗಗಳ ಜನರಿರುವ ಸಮುದಾಯಗಳಲ್ಲೇ ಶೂ ಧರಿಸಿ ನಡೆಯುವುದು ಮೈಲಿಗೆಯಾಗಲಿದೆ ಎಂಬುದು ತಲೆ ತಗ್ಗಿಸುವಂತ ಸಂಗತಿಯಾಗಿದೆ ಎಂದಿದ್ದಾರೆ.

ಇದರೊಂದಿಗೆ ಮೈಸೂರು ಜಿಲ್ಲೆಯ ಕೆಂಚಲಗೂಡು ಗ್ರಾಮದಲ್ಲಿ ದಲಿತರು ದೇವಾಲಯಕ್ಕೆ ನುಗ್ಗಿದರು ಎಂದು ಪ್ರತ್ಯೇಕ ದೇವಾಲಯ ನಿರ್ಮಾಣ ಮಾಡುವ ಮನಸ್ಥಿತಿ ಕಂಡು ನನ್ನ ಮನಸ್ಸು ಘಾಸಿಗೊಂಡಿದೆ

ಅಂಬೇಡ್ಕರ್‌ ಹೇಳಿದಂತೆ ನಮ್ಮ ಜನರು ಅದರಲ್ಲೂ ಪ್ರಮುಖವಾಗಿ ಯುವಕರು ಮೌಢ್ಯತೆಯಿಂದ ಮೊದಲು ಹೊರಬರಬೇಕಿದೆ. ಉತ್ತಮ ಶಿಕ್ಷಣ ಪಡೆದು, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಬೆಳೆಯುವತ್ತಾ ಗಮನ ನೀಡಬೇಕು. ಇಲ್ಲವಾದರೆ ಹಲವಾರು ತ್ಯಾಗ ಬಲಿದಾನಗಳಿಂದ ರೂಪುಗೊಂಡ ಸಂವಿಧಾನದ ಆಶಯಗಳು ನಾಶವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಯಾವ ಮನುವಾದಿ ಮಾರ್ಗವನ್ನು ಅಂಬೇಡ್ಕರ್‌ ಅವರು ಹಿಡಿಯಬಾರದು ಎಂದು ಬಯಸಿದ್ದರೋ ಇಂದು ಅದೇ ಮಾರ್ಗದಲ್ಲಿ ಕೆಲವರು ಹೋಗುತ್ತಿರುವುದು ಶೋಚನೀಯವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!