ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಪ್ರಾಣಪ್ರತಿಷ್ಠೆ ನಡೆಯಲಿದ್ದು, ಇದರ ಕುರಿತಾಗಿ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶವನ್ನು ಹೊರಡಿಸಿದ್ದಾರೆ ಹಾಗೂ ಇದೇ ಸಮಯದಲ್ಲಿ ಮನವಿಯನ್ನೂ ಮಾಡಿದ್ದಾರೆ.
ಉತ್ತರ ಪ್ರದೇಶದ ಎಲ್ಲಾ ಶಾಲಾ ಕಾಲೇಜಿಗೂ ಸಹ ರಜೆ ಘೋಷಿಸಲಾಗಿದೆ ಹಾಗೂ ಅಂದು ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ ಪ್ರಾಣಪ್ರತಿಷ್ಠೆಯ ಐತಿಹಾಸಿಕ ದಿನವನ್ನು ಶಾಂತಿಯುತವಾಗಿ ಸಂಭ್ರಮಿಸಬೇಕೆಂದು ಮನವಿಯನ್ನೂ ಸಹ ಮಾಡಿದ್ದಾರೆ.
500 ವರ್ಷಗಳ ಬಳಿಕ ಶ್ರೀ ರಾಮಮಂದಿರ ಮಂದಿರ ನಿರ್ಮಾಣಗೊಂಡಿದೆ. ಈ ಐತಿಹಾಸಿಕ ದಿನ ನಮಗೆಲ್ಲರಿಗೂ ಅತ್ಯಂತ ಮಹತ್ವದ ಹಾಗೂ ಸಂಭ್ರಮದ ದಿನವಾಗಿದೆ. ಈ ದಿನವನ್ನು ಸಂಭ್ರಮಿಸಲು ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಿ ಎಂದು ಯೋಗಿ ಆದಿತ್ಯನಾಥ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.





