Mysore
28
scattered clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಬಿಲ್ಕಿಸ್‌ ಬಾನು ಪ್ರಕರಣ: ಆರೋಪಿಗಳಿಗೆ ಜೈಲಿಗೆ ಮರಳಲು ಎರಡು ವಾರಗಳ ಕಾಲಾವಕಾಶ ನೀಡಿದ ಸುಪ್ರೀಂ

ನವದೆಹಲಿ : ಬಿಲ್ಕಿಸ್ ಬಾನು ಹತ್ಯೆ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಶಿಕ್ಷೆ ಕಡಿತಗೊಳಿಸಿ ಮೇ 2022 ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಇಂದು ರದ್ದುಗೊಳಿಸಿದೆ.

ಬಿಲ್ಕಿಸ್‌ ಬಾನು ಹತ್ಯೆ ಮಾಡಿದ್ದ ಆರೋಪಿಗಳು ತಮಗೆ ನೀಡಲಾಗಿದ್ದ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸುವಂತೆ ಕೋರಿ ಗುಜರಾತ್‌ ಸರ್ಕಾರಕ್ಕೆ ಮನವಿ ಸಲ್ಲಿಸಲು ಅನುಮತಿ ನೀಡಲಾಗಿದ್ದ ಸುಪ್ರೀಂ ಆದೇಶವನ್ನು ಸ್ವತಃ ಸುಪ್ರೀಂ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ನಿವೃತ್ತರಾಗಿರುವ ನ್ಯಾಯಾದೀಶರಾದ ಅಜಯ್‌ ರಸ್ತೆಗಿ ಆದೇಶ ನೀಡಿದ್ದರು.

ವಂಚನೆ ಹಾಗೂ ವಾಸ್ತವಗಳನ್ನು ಮರೆಮಾಡಿ ಈ ಆದೇಶವನ್ನು ಪಡೆಯಲಾಗಿತ್ತು ಎಂದಿರುವ ಸುಪ್ರೀಂ ಕೋರ್ಟ್‌, ಅಪರಾಧಿಗಳ ಬಿಡುಗಡೆ ಮರುಪರಿಶೀಲಿಸಲು ಅರ್ಜಿ ಸಲ್ಲಿಸದೇ ಇರುವುದಕ್ಕೆ ಗುಜರಾತ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅಪರಾಧಿಗಳ ವಿಚಾರಣೆಯು ಮಹಾರಾಷ್ಟ್ರ ನ್ಯಾಯಾಲಯದಲ್ಲಿ ನಡೆದಿದ್ದರಿಂದ ಮಹಾರಾಷ್ಟ್ರ ಸರ್ಕಾರ ಮಾತ್ರ ಅವರ ಶಿಕ್ಷೆ ಕಡಿತಗೊಳಿಸುವ ಹಕ್ಕು ಹೊಂದಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಪರಾಧಿಗಳಲ್ಲೊಬ್ಬ ರಾಧೇಶ್ಯಾಮ್ ಭಗವಾನ್‌ ದಾಸ್ ಶಾ ಎಂಬಾತ ಶಿಕ್ಷೆ ಕಡಿತಗೊಳಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಕೋರಿದ ಅನುಮತಿಯನ್ನು ಜುಲೈ 2019ರಲ್ಲಿ ಗುಜರತ್ ಹೈಕೋರ್ಟ್ ನಿರಾಕರಿಸಿದ ನಂತರ ಸಲ್ಲಿಸಿದ್ದ ಅರ್ಜಿ ಇದಾಗಿತ್ತು.

ಆತ ಮಹಾರಾಷ್ಟ್ರ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದರೂ ನಿರ್ಧಾರ ಪ್ರಕಟಗೊಳ್ಳುವ ಮುನ್ನವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.

ಈ ಹಿಂದೆ ಆಗಸ್ಟ್ ತಿಂಗಳಿನಲ್ಲಿ ತನ್ನ ಮೇ 2022 ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿತ್ತು. ಗುಜರಾತ್ ಸರ್ಕಾರ ಅಪರಾಧಿಗಳ ಬಿಡುಗಡೆಗೆ ನೀಡಿರುವ ಆದೇಶ ರದ್ದುಗೊಳಿಸಿರುವ ಸುಪ್ರೀಂ, ಆರೋಪಿಗಳಿಗೆ ಜೈಲಿಗೆ ಮರಳಲು ಎರಡು ವಾರಗಳ ಗಡುವು ನೀಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ