Mysore
29
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಬೇಸಿಗೆಗೆ ಜಪಾನ್‌ನಲ್ಲಿ ರಿಲೀಸ್‌ ಆಗಲಿದೆ ಪ್ರಭಾಸ್‌ ನಟನಯೆ “ಸಲಾರ್‌”

ಪ್ರಭಾಸ್‌ ನಟನೆಯ ಮಾಸ್‌ ಎಲಿಮೆಂಟ್‌ ಸಿನಿಮಾ ಸಲಾರ್‌ ಕದನ ವಿರಾಮ-1 ಚಿತ್ರ ದೇಶಾದ್ಯಂತ ಯಶಸ್ಸು ಕಂಡ ಬಳಿಕ ಇದೀಗ ದ್ವೀಪ ರಾಷ್ಟ್ರ ಜಪಾನ್‌ ನಲ್ಲಿ ಬೇಸಿಗೆಗೆ ಸಲಾರ್‌ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಹೊಂಬಾಳೆ ಪಿಲ್ಮ್ಸ್‌ ನಿರ್ಮಿಸಿ, ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಚಿತ್ರದ ವಿತರಣೆಯನ್ನು ಜಪಾನ್‌ ವಿತರಣ ಕಂಪನಿ ʼಟ್ವಿನ್‌ʼ ಹಕ್ಕನ್ನು ಪಡೆದುಕೊಂಡಿದ್ದು, ಬೇಸಿಗೆಗೆ ಚಿತ್ರವನ್ನು ಬಿಡುಗಡೆ ಮಾಡಲಿದೆ.

ಟ್ವಿನ್‌-೨ ಹೆಸರನ ಮೂಲಕ ಜಪಾನಿನಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬೇಸಿಗೆಯಲ್ಲಿ ಸಲಾರ್‌ ಚಿತ್ರ ಬಿಡುಗಡೆಯಾಗಲಿದೆ. ಎಂದು ಚತ್ರ ತಂಡ ಶನಿವಾರ ಎಕ್ಸ್‌ ನ ಸಲಾರ್‌ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಜೊತೆಗೆ ಮಾರ್ಚ್‌ ಏಳರಂದು ಲ್ಯಾಟಿನ್‌ ಅಮೇರಿಕಾದಲ್ಲಿ ಸ್ಪ್ಯಾನಿಷ್‌ ಭಾಷೆಯಲ್ಲಿ ಸಲಾರ್‌ ತೆರೆಕಾಣಲಿದೆ.

ಪ್ರಭಾಸ್‌, ಪೃಥ್ವಿರಾಜ್‌ ನಾಯಕರಾಗಿ ನಟಿಸಿರುವ ಸಲಾರ್‌ ಚಿತ್ರ ೨೦೨೩ರ ಡಿಸೆಂಬರ್‌ ೨೨ ರಂದು ದೇಶಾದ್ಯಂತ ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಮತ್ತು ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ೬೫೦ ಕೋಟಿ ರೂ ಗಳಿಕೆ ಕಂಡು ಮುನ್ನುಗ್ಗುತ್ತಿದೆ.

ನಾಯಕಿಯಾಗಿ ಶ್ರುತಿ ಹಾಸನ್‌, ಜಗಪತಿ ಬಾಬು, ಈಶ್ವರಿ ರಾವ್‌, ಶ್ರೀಯಾ ರೆಡ್ಡಿ ಸೇರಿದಂತೆ ಹಲವು ನಟ-ನಟಿಯರ ದಂಡೇ ಚಿತ್ರ ತಂಡದಲ್ಲಿದೆ.

https://x.com/SalaarTheSaga/status/1743607138847744490?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ