Mysore
22
broken clouds

Social Media

ಮಂಗಳವಾರ, 27 ಜನವರಿ 2026
Light
Dark

ಇಂದು ಕಿರುತೆರೆಯಲ್ಲಿ ವೀಕ್ಷಿಸಿ ಟಗರು ಪಲ್ಯ !

ಬೆಂಗಳೂರು : ಕಳೆದ ವರ್ಷ ಅಕ್ಟೋಬರ್ 27ರಂದು ತೆರೆ ಕಂಡು ಸೂಪರ್ ಡೂಪರ್ ಹೀಟ್ ಆಗಿದ್ದ ಫ್ಯಾಮಿಲಿ ಎಂಟರ್ಟೈನರ್ ‘ಟಗರು ಪಲ್ಯ’ ಸಿನಿಮಾ ಇಂದು ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದು ಸಂಜೆ 6 ಗಂಟೆಗೆ ಈ ಚಿತ್ರ ವೀಕ್ಷಿಸಬಹುದಾಗಿದ.

ಉಮೇಶ್ ಕೆ ಕೃಪಾ ನಿರ್ದೇಶನದ ಈ ಚಿತ್ರದಲ್ಲಿ ನಾಗಭೂಷಣ ಮತ್ತು ಪ್ರೇಮ್ ಪುತ್ರಿ ಅಮೃತ ಪ್ರಮುಖ ಪಾತ್ರದಲ್ಲಿದ್ದು, ಶೃತಿ, ಶರತ್ ಲೋಹಿತಾಶ್ವ,

ಚಂದ್ರಕಲಾ ಮೋಹನ್, ರಂಗಾಯಣ ರಘು, ವಾಸಕಿ ವೈಭವ್, ವೈಜನಾಥ್ ಬಿರಾದರ್ ತೆರೆ ಹಂಚಿಕೊಂಡಿದ್ದಾರೆ. ಡಾಲಿ ಧನಂಜಯ್ ತಮ್ಮ ಡಾಲಿ ಪಿಚ್ಚರ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮಧು ತುಂಬಾ ಕೆರೆ ಅವರ ಸಂಕಲನವಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!