Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ತಪ್ಪಲಿದೆ ಚಿಲ್ಲರೆ ತಲೆಬಿಸಿ; ಶೀಘ್ರದಲ್ಲೇ ಕ್ಯಾಶ್‌ಲೆಸ್‌ ಆಗಲಿದೆ ಕೆಎಸ್‌ಆರ್‌ಟಿಸಿ!

ಯುಪಿಐ ಬಂದಾಗಿನಿಂದ ಹಲವಾರು ಮಂದಿ ತಾವು ಪ್ರತಿನಿತ್ಯ ಪ್ರಯಾಣಿಸುವ ಬಸ್‌ಗಳಲ್ಲಿಯೂ ಟಿಕೆಟ್‌ ಪಡೆದುಕೊಳ್ಳಲು ಯುಪಿಐ ಪಾವತಿಯನ್ನು ಸ್ವೀಕರಿಸಿದರೆ ಉತ್ತಮವಾಗಿರುತ್ತಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸುವರೂ ಸಹ ಚಿಲ್ಲರೆ ಕಿರಿಕಿರಿಯಾದಾಗಲೆಲ್ಲಾ ಆನ್‌ಲೈನ್‌ ಪೇಮೆಂಟ್‌ ಇದ್ದಿದ್ದರೆ ಎಷ್ಟು ಚೆಂದ ಎಂದುಕೊಂಡಿದ್ದುಂಟು.

ಇದೀಗ ಇಂತಹ ಹಲವರ ಅಭಿಪ್ರಾಯ ಹಾಗೂ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ರಾಜ್ಯ ಸಚಿವ ರಾಮಲಿಂಗರೆಡ್ಡಿ ಈ ಕುರಿತು ಮಾಧ್ಯಮದವರ ಜತೆ ಮಾಹಿತಿ ಹಂಚಿಕೊಂಡಿದ್ದು, ಶೀಘ್ರದಲ್ಲಿಯೇ ಕ್ಯಾಶ್‌ಲೆಸ್‌ ಪ್ರಯಾಣ ಮಾಡಬಹುದು, ಅದರ ಕುರಿತ ಕೆಲಸಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮೂರು ತಿಂಗಳಲ್ಲಿ ಕ್ಯಾಶ್‌ಲೆಸ್‌ ಶುರುವಾಗಲಿದೆ. ತಾಂತ್ರಿಕ ಕೆಲಸಗಳು ಜರುಗುತ್ತಿದ್ದು, ಜನರಿಗೆ ಇರುವ ಚಿಲ್ಲರೆ ಸಮಸ್ಯೆಗಳು ಕಡಿಮೆಯಾಗಲಿದೆ. ಈಗಾಗಲೇ ವಾಯುವ್ಯದಲ್ಲಿ ಕ್ಯಾಶ್‌ಲೆಸ್‌ ಇದ್ದು ಇಲ್ಲಿಯೂ ಬರಲಿದೆ ಎಂದು ರಾಮಲಿಂಗರೆಡ್ಡಿ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!