Mysore
25
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಮಸ್ಯೆ ಹೇಳಿಕೊಂಡ ಮಹಿಳೆಗೆ ಸರ್ಕಾರದ ಬಳಿ ದುಡ್ಡಿಲ್ಲ, ಅನುಸಿರಿಕೊಳ್ಳಿ ಎಂದ ಶಾಸಕ!

ಕೆಆರ್‌ ಪೇಟೆಯ ಶಾಸಕ ಹೆಚ್‌ ಟಿ ಮಂಜು ತಮ್ಮ ಕ್ಷೇತ್ರದ ಮಹಿಳೆಯೊಬ್ಬರು ಅವರ ಗ್ರಾಮದ ಸಮಸ್ಯೆಯೊಂದನ್ನು ಹೇಳಿಕೊಂಡು ಬಂದಾಗ ಸರ್ಕಾರದ ಬಳಿ ದುಡ್ಡಿಲ್ಲ ಅನುಸರಿಸಿಕೊಂಡು ಹೋಗಿ ಎಂದು ಮನವಿ ಮಾಡಿಕೊಂಡ ಘಟನೆ ನಡೆದಿದೆ.

ಮಹಿಳೆ ತನ್ನ ಬಳಿ ರಸ್ತೆ ಸರಿ ಮಾಡಿಸುವ ಬಗ್ಗೆ ಮಾತನಾಡಿದಾಗ ಪ್ರತಿಕ್ರಿಯಿಸಿದ ಜೆಡಿಎಸ್‌ ಶಾಸಕ ಹೆಚ್‌ ಟಿ ಮಂಜು ಸರ್ಕಾರ ಅನುದಾನವನ್ನೆಲ್ಲಾ ಯೋಜನೆಗಳಿಗೆ ಬಳಸಿಕೊಂಡಿದೆ. ಶಾಸಕರ ಕ್ಷೇತ್ರಗಳಿಗೆ ಬಿಡಿಗಾಸನ್ನು ಮಾತ್ರ ನೀಡುತ್ತಿದೆ. ಅನು ಶಾಸಕನಾಗಿ 9 ತಿಂಗಳಗಾಗಿದ್ದು, ಸರ್ಕಾರ ಇಲ್ಲಿಯವರೆಗೆ ಕೇವಲ 50 ಲಕ್ಷ ನೀಡಿದೆ. 380 ಹಳ್ಳಿಗಳಿರುವ ಕ್ಷೇತ್ರವನ್ನು 50 ಲಕ್ಷ ರೂಪಾಯಿಯಲ್ಲಿ ಅಭಿವೃದ್ಧಿಪಡಿಸುವುದು ಹೇಗೆ, ಸರ್ಕಾರದ ಬಳಿ ನೌಕರರಿಗೆ ಸಂಬಳ ಕೊಡಲು ಸಹ ಹಣವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ