Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಎಂವಿ ಲೀಲಾ ಹಡಗು ರಕ್ಷಣೆ: ಭಾರತೀಯರೂ ಸೇರಿದಂತೆ ೨೧ ಸಿಬ್ಬಂದಿ ರಕ್ಷಿಸಿದ ಭಾರತೀಯ ನೌಕಾಪಡೆ!

 ನವದೆಹಲಿ : ಅರೇಬಿಯನ್ ಸಮುದ್ರದಲ್ಲಿ ಅಪಹರಣಕ್ಕೊಳಗಾದ ಹಡಗಿನಿಂದ ಎಲ್ಲಾ 15 ಭಾರತೀಯರನ್ನು ಸೇರಿದಂತೆ ಒಟ್ಟು ೨೧ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆಯ ಕಮಾಂಡೋಗಳು ರಕ್ಷಿಸಿದ್ದಾರೆ.

ಘಟನೆಯ ಬಗ್ಗೆ ತಿಳಿದ ನಂತರ, ಯುದ್ಧನೌಕೆ ಐಎನ್‌ಎಸ್ ಚೆನ್ನೈ ಸೊಮಾಲಿ ಕರಾವಳಿಯಲ್ಲಿ ಅಪಹರಣಕ್ಕೊಳಗಾದ ಹಡಗು ಎಂವಿ ಲೀಲಾ ನಾರ್ಫೋಕ್’ನ್ನ ಸಮೀಪಿಸಿ ಅಪಹರಣಕ್ಕೊಳಗಾದ ಹಡಗನ್ನ ಬಿಡುಗಡೆ ಮಾಡುವಂತೆ ಭಾರತೀಯ ನೌಕಾಪಡೆ ಕಡಲ್ಗಳ್ಳರಿಗೆ ಎಚ್ಚರಿಕೆ ನೀಡಿತು.

ಹಡಗಿನಲ್ಲಿದ್ದ ಭಾರತೀಯ ತಂಡ ಸುರಕ್ಷಿತವಾಗಿದೆ. ಮೆರೈನ್ ಕಮಾಂಡೋ ಮಾರ್ಕೋಸ್ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

ಸರಕು ಹಡಗು ಎಂವಿ ಲೀಲಾ ನಾರ್ಫೋಕ್ ಅನ್ನು ನಿನ್ನೆ ಸಂಜೆ ಸೊಮಾಲಿಯಾ ಕರಾವಳಿಯಲ್ಲಿ ಅಪಹರಿಸಲಾಗಿತ್ತು. ಇದರಲ್ಲಿ 15 ಭಾರತೀಯರಿದ್ದರು. ಹಡಗಿನಲ್ಲಿ ಐದರಿಂದ ಆರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಇದ್ದರು ಎನ್ನಲಾಗಿದೆ.

ಅರೇಬಿಯನ್ ಸಮುದ್ರದಲ್ಲಿ ಈ ಕಡಲ ಘಟನೆಗೆ ಭಾರತೀಯ ನೌಕಾಪಡೆ ತ್ವರಿತವಾಗಿ ಪ್ರತಿಕ್ರಿಯಿಸಿದೆ. ಇದರಲ್ಲಿ ಲೈಬೀರಿಯನ್ ಧ್ವಜ ಹೊಂದಿರುವ ಹಡಗನ್ನು ಅಪಹರಿಸುವ ಪ್ರಯತ್ನ ನಡೆದಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಸುಮಾರು ಐದರಿಂದ ಆರು ಅಪರಿಚಿತ ಸಶಸ್ತ್ರ ವ್ಯಕ್ತಿಗಳು ಹಡಗನ್ನು ಹತ್ತಿದ್ದಾರೆ ಎಂದು ಹಡಗು ಯುಕೆಎಂಟಿಒ ಪೋರ್ಟಲ್ಗೆ ಸಂದೇಶ ಕಳುಹಿಸಿದೆ ಎಂದು ಅವರು ಹೇಳಿದರು.

ಅರೇಬಿ ಸಮುದ್ನಾರಕ್ಲ್ಕುಕಿಳಿದ ಭಾರತದ ಶಕ್ತಿಶಾಲಿ  ಮೂರು ಹಡಗು: ಅರಬೀ ಸಮುದ್ರದಲ್ಲಿ ಕಡಲ್ಗಳ್ಳರಿಗೆ ಎಚ್ಚರಿಕೆ ನೀಡಲು ಭಾರತದ ಐಎನ್‌ಎಸ್‌ ಚೆನೈ, ಐಎನ್‌ಎಸ್‌ ಮರ್ಮಗೋವ ಮತ್ತು ಐಎನ್‌ಎಸ್‌ ವಿಶಾಕಪಟ್ಟಣಂ ಎಂಬ ಮೂರು ಶಕ್ತಿಶಾಲಿ ನೌಕೆಗಳನ್ನು ಸಮುದ್ರಕ್ಕಿಳಿಸಿದೆ. ಅಪಹೃಣಕ್ಕೊಳಗಾಗಿದ್ದ ಎಂ ವಿ ಲೀಲಾ ರಕ್ಷಣೆ ಸೇರಿದಂತೆ ಸರಕು ಸಾಗಾಣೆ ಮಾಡುವ ಹಡಗುಗಳಿಗೆ ರಕ್ಷಣೆ ನೀಡಲಾಗುತ್ತಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ